Suicide: 7 ದಿನದ ಮಗು ಬಿಟ್ಟು ದಂಪತಿ ಆತ್ಮಹತ್ಯೆ!

Share the Article

Suicide: ಕೇವಲ ಏಳು ದಿನದ ಹಸುಗೂಸನ್ನು ಬಿಟ್ಟು ದಂಪತಿ (Couple) ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೋಲಾರ (Kolar) ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಫರಿಜಾ(22), ರೆಹಮಾನ್​(28) ಆತ್ಮಹತ್ಯೆಗೆ ಶರಣಾದ ದಂಪತಿ.ಮೃತ ದಂಪತಿ 15 ದಿನಗಳಿಂದಷ್ಟೇ ಶ್ರೀನಿವಾಸರೆಡ್ಡಿ ಎಂಬುವರ ಕೋಳಿ ಫಾರಂನಲ್ಲಿ ಕೆಲಸಕ್ಕೆ ಸೇರಿಕೊಂಡಿತ್ತು. ಏಳು ದಿನಗಳ ಹಿಂದಷ್ಟೇ ರೆಹಮಾನ್, ಫರಿಜಾ ದಂಪತಿಗೆ ಹೆಣ್ಣು ಹುಟ್ಟಿತ್ತು. ಆದ್ರೆ, ಇದೀಗ ಚಿಕ್ಕ ಹಸುಳೆಯನ್ನು ಬಿಟ್ಟು ದಂಪತಿ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದೆ. ಆದ್ರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ರಾಯಲ್ಪಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Comments are closed.