PMUY: ಹೊಸ LPG ಪಡೆಯಲು ಪಿಎಂ ಉಜ್ವಲ ಯೋಜನೆ ಅಡಿಯಲ್ಲಿಅರ್ಜಿ ಆಹ್ವಾನ – ಅರ್ಹತೆ ಏನು, ಅರ್ಜಿ ಸಲ್ಲಿಸುವುದು ಹೇಗೆ?

PMUY: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (ಪಿಎಂಯುವೈ) ಗ್ಯಾಸ್ ಏಜೆನ್ಸಿಗಳಿಂದ ಉಜ್ವಲ-3 ಅಡಿಯಲ್ಲಿ ಹೊಸ ಗ್ಯಾಸ್ ಸಂಪರ್ಕ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹರು ಈ ಕೂಡಲೇ ಈ ದಾಖಲೆಗಳೊಂದಿಗೆ ಬೇಗ ಅರ್ಜಿ ಸಲ್ಲಿಸಿ.

ಹೌದು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಅರ್ಹರಿಗೆ ಹೊಸ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಅಹ್ವಾನ ಮಾಡಲಾಗಿದೆ. 18 ವರ್ಷ ಮೇಲ್ಪಟ್ಟ ವಯಸ್ಕ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಕುಟುಂಬದಲ್ಲಿ ಈಗಾಗಲೇ ಗ್ಯಾಸ್ ಸಂಪರ್ಕ ಇದ್ದರೆ, ಹೊಸ ಸಂಪರ್ಕ ಸಿಗುವುದಿಲ್ಲ.
ಅರ್ಹತೆ ಏನು?
ಕುಟುಂಬದ ಯಾವುದೇ ಸದಸ್ಯರಿಗೆ ತಿಂಗಳಿಗೆ ₹10,000 ಆದಾಯ ಇರಬಾರದು. ಸರ್ಕಾರಿ ಉದ್ಯೋಗಿಗಳಿಗೆ ಈ ಸೌಲಭ್ಯವಿಲ್ಲ. ಸುಮಾರು 2.5 ಎಕರೆ ನೀರಾವರಿ ಅಥವಾ 5 ಎಕರೆ ಕೃಷಿ ಭೂಮಿ, ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ ₹50,000ಕ್ಕಿಂತ ಹೆಚ್ಚು ಸಾಲ ಇರುವಂತಿಲ್ಲ. 30 ಚದರ ಅಡಿ ಮನೆ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರಬಾರದು. ಈ ಅರ್ಹತೆಗಳಿರುವ ಬಡ ಮಹಿಳೆಯರು ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು. ಅಲ್ಲದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮಹಿಳಾ ಫಲಾನುಭವಿಗಳಿಗೆ ಮಾತ್ರವೇ ಇದೆ. ಪುರುಷರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅವಕಾಶವಿಲ್ಲ.
Comments are closed.