ಧರ್ಮಸ್ಥಳ ಪ್ರಕರಣದ ತನಿಖೆ ಪೂರ್ಣ ಆಗಿಲ್ಲ: ಗೃಹಸಚಿವ ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ದೋಷಾರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಕೇವಲ ವರದಿಗಳನ್ನಷ್ಟೇ ಸಲ್ಲಿಸಲಾಗಿದೆ. ತನಿಖಾ ಹಂತದ ಪ್ರಕರಣದ ಬಗ್ಗೆ ಹೆಚ್ಚು ಚರ್ಚೆ ಮಾಡಲು ಆಗುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ನಾನಾಗಲಿ, ಮುಖ್ಯಮಂತ್ರಿಗಳಾಗಲಿ ವಿಶೇಷ ತನಿಖಾ ತಂಡದ (ಎಸ್ ಐಟಿ) ಅಧಿಕಾರಿಗಳಿಗೆ ಕರೆ ಮಾಡಿ ಮಾತಾಡಿಲ್ಲ. ಎಸ್‌ಐಟಿ ತಂಡಕ್ಕೆ ಸ್ವಾತಂತ್ರ್ಯವಾಗಿ ತನಿಖೆ ನಡೆಸಲು ಅನುಮತಿ ಕೊಟ್ಟಿದ್ದೇವೆ. ಈ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ನಡೆಸಲಾಗಿಲ್ಲ. ತನಿಖೆ ಸೂಕ್ತವಾಗಿ ಸಾಗಬೇಕಿದೆ ಎಂದು ಅವರು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣದ ಮಾಡಲಿಲ್ಲ ಸರಿಯಾಗಿ ಎಂದಾದರೆ, ಪ್ರಕರಣ ಸಂಬಂಧ ಸೂಕ್ತ ಮಾಹಿತಿ ಒದಗಿಸದಿದ್ದಾಗ, ಸರಿಯಾದ ತನಿಖೆ ನಡೆಯದಿದ್ದಾಗ ಕೋರ್ಟು ತಡೆ ನೀಡುತ್ತದೆ. ಧರ್ಮಸ್ಥಳ ಪ್ರಕರಣದಲ್ಲಿ ಇನ್ನೂ ತನಿಖೆ ಮುಗಿದಿಲ್ಲ. ಚಾರ್ಜ್ ಶೀಟ್ ಕೊಟ್ಟ ಕೂಡಲೇ ಪ್ರಕರಣ ಮುಗಿದಿದೆ ಎಂದರ್ಥವಲ್ಲ, ಮುಂದೆ ತನಿಖೆ ಎತ್ತ ಸಾಗುತ್ತದೆ ಎಂಬುದನ್ನು ಕಾದು ನೋಡಿ. ತನಿಖೆ ಮಾಡಿದಾಗ ಬುರುಡೆ ಪ್ರಕರಣ ಸೇರಿದಂತೆ ಪ್ರಕರಣಗಳಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬಿತ್ಯಾದಿ ವಿಷಯಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವರು ಹೇಳಿದರು.
Comments are closed.