ಹೆಂಡತಿ ಜತೆ ಬೆಡ್ ರೂಮ್ ಗೆ ಹೋದ್ರೂ ಇನ್ಮುಂದೆ ಸರ್ಕಾರಕ್ಕೆ ಗೊತ್ತಾಗುತ್ತೆ!

ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿವಾದಾತ್ಮಕ ಸಂಚಾರ್ಸಾಥಿ ಗೊಂದಲ ಮುಗಿಯಿತು ಎನ್ನುವಷ್ಟರಲ್ಲಿ ಭಾರತದಲ್ಲಿನ ಎಲ್ಲ ಸ್ಮಾರ್ಟ್ ಫೋನ್ ಗಳ ಲೊಕೇಶನ್ ಕಡ್ಡಾಯವಾಗಿ ಟ್ರ್ಯಾಕ್ (ಜಾಡು ಹಿಡಿಯುವ) ನಿಯಮವೊಂದನ್ನು ರೂಪಿಸಲು ಭಾರತ ಸರಕಾರ ಮುಂದಾಗಿದೆ ಎಂದು ವರದಿಯಾಗಿದೆ. ಈ ನಿಯಮ ಜಾರಿಗೆ ಬಂದರೆ, ಯಾರು ಎಲ್ಲೆಲ್ಲಿ, ಯಾರ ಜತೆ ಹೋಗುತ್ತಾರೆ ಬರುತ್ತಾರೆ ಇರುತ್ತಾರೆ ಮಲಗುತ್ತಾರೆ ಅನ್ನೋದು ಕೂಡಾ ಸರ್ಕಾರಕ್ಕೆ ಗೊತ್ತಾಗಲಿದೆ.

ಸ್ಮಾರ್ಟ್ ಫೋನ್ ಗಳ ಲೊಕೇಶನ್ ಕಡ್ಡಾಯವಾಗಿ ಟ್ರ್ಯಾಕ್ ಮಾಡುವ ಸರಕಾರದ ಪ್ರಸ್ತಾವಕ್ಕೆ ಬಳಕೆದಾರರ ಗೌಪ್ಯತೆಯ ಕಾಳಜಿಯನ್ನು ಮುಂದಿಟ್ಟು ಆ್ಯಪಲ್, ಎಲ್ಜಿ ,ಸ್ಯಾಮ್ಸಂಗ್ ಮುಂತಾದ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ ಎಂದು ವರದಿಯಾಗಿದೆ. ಯಾವುದೇ ಅಪರಾಧಗಳ ತನಿಖೆಯ ಸಂದರ್ಭದಲ್ಲಿ ಮಾತ್ರವೇ, ಕಾನೂನಿನ್ವಯವೇ ಆರೋಪಿಗಳ ಚಲನವಲನವನ್ನು ಕೋರಬೇಕೆ ವಿನಃ ಓಡಾಡಿದ ಸ್ಥಳಗಳ ಮಾಹಿತಿಯನ್ನು ದೂರಸಂಪರ್ಕ ಸಂಸ್ಥೆಗಳಿಗೆ ಸರಕಾರ ಕೋರುವುದು ಮೂಲಭೂತ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ.
ಇತ್ತೀಚೆಗಷ್ಟೇ ಸಂಚಾರ ಸಾಥಿ ಆ್ಯಪ್ ಅನ್ನು ಮೊಬೈಲ್ನಲ್ಲಿ ಮೊದಲೇ ಅಳವಡಿಸಬೇಕು ಎಂದು ಕೇಂದ್ರವು ಆದೇಶಿಸಿ, ನಂತರ ತೀವ್ರ ವಿರೋಧದ ನಂತರ ಆದೇಶ ಹಿಂಪಡೆದು ಮುಖಭಂಗಕ್ಕೆ ಒಳಗಾಗಿತ್ತು. ಇದೀಗ ಮತ್ತೊಂದು ರೀತಿಯಲ್ಲಿ ಜನಸಾಮಾನ್ಯರ ಮನೆಯೊಳಕ್ಕೆ ನುಗ್ಗಲು ಕೇಂದ್ರ ಯತ್ನಿಸಿದೆ.
Comments are closed.