RBI: ದೇಶದ 3 ಸೇಫೆಸ್ಟ್ ಬ್ಯಾಂಕ್ ಪಟ್ಟಿ ಪ್ರಕಟಿಸಿದ ಆರ್‌ಬಿಐ

RBI: ಹಣ ಉಳಿತಾಯ, ಫಿಕ್ಸೆಡ್ ಡೆಪಾಸಿಟ್ ಸೇರಿದಂತೆ ಇತರ ಯಾವುದೇ ರೂಪದಲ್ಲಿ ಹಣ ಇಡಲು, ಹೂಡಿಕೆ ಮಾಡಲು ದೇಶದ ಮೂರು ಸುರಕ್ಷಿತ ಬ್ಯಾಂಕ್ ಪಟ್ಟಿಯನ್ನು ಆರ್‌ಬಿಐ ಬಿಡುಗಡೆ ಮಾಡಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿ ಮೂರು ಬ್ಯಾಂಕ್‌ಗಳು ಅತ್ಯಂತ ಸುರಕ್ಷಿತ ಎಂದು ಪಟ್ಟಿ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಹೆಚ್‌ಡಿಎಫ್‌ಸಿ, ಐಸಿಐಸಿಐ ಈ ಬ್ಯಾಂಕ್‌ಗಳು ಅತ್ಯಂತ ವ್ಯವಸ್ಥಿತವಾಗಿ ಹಣಕಾಸನ್ನು ನಿರ್ವಹಿಸುತ್ತದೆ.
ಭಾರತದೆಲ್ಲೆಡೆ ಈ ಮೂರು ಬ್ಯಾಂಕ್‌ಗಳು ಪಾರದರ್ಶಕತೆ, ಲೆಕ್ಕ, ಆಡಿಟ್ ಎಲ್ಲವೂ ಉತ್ತಮವಾಗಿದೆ ಎಂದು ಆರ್‌ಬಿಐ ಹೇಳಿದೆ. ದೇಶಕ್ಕೆ ವ್ಯವಸ್ಥಾತ್ಮಕವಾಗಿ ಅತ್ಯಂತ ಪ್ರಮುಖ ಬ್ಯಾಂಕ್‌ಗಳು (D-SIBs) ಎಂಬ ಹೆಗ್ಗಳಿಕೆಗೆ ಎಸ್‌ಬಿಐ, ಹೆಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್ ಪಾತ್ರವಾಗಿದೆ. 2024ರಲ್ಲೂ ಈ ಮೂರು ಬ್ಯಾಂಕ್‌ಗಳು D-SIBs ಬ್ಯಾಂಕ್ ಎಂದು ಗುರತಿಸಿಕೊಂಡಿತ್ತು. ದೇಶದ ಅರ್ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಈ ಬ್ಯಾಂಕ್ ಪ್ರಮುಖ ಪಾತ್ರನಿರ್ವಹಿಸುತ್ತಿದೆ ಎಂದು ಆರ್‌ಬಿಐ ಹೇಳಿದೆ.ದೇಶದಲ್ಲಿ ಹಲವು ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದೆ. ಈ ಪೈಕಿ ಎಸ್‌ಬಿಐ, ಹೆಡ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್ ಮೇಲೆ ಜನರು ಯಾವುದೇ ಅಳುಕಿಲ್ಲದೆ ವಶ್ವಾಸವಿಡಬಹುದು ಎಂದು ಆರ್‌ಬಿಐ ಹೇಳಿದೆ.
Comments are closed.