Cricket: ಸಚಿನ್‌ ದಾಖಲೆ ಬ್ರೇಕ್‌: ವಿಶ್ವದಾಖಲೆ ಬರೆದ ಕೊಹ್ಲಿ

Share the Article

Cricket: ದಕ್ಷಿಣ ಆಫ್ರಿಕಾ (South Africa) ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶತಕ (Century) ಸಿಡಿಸುವ ಮೂಲಕ ವಿರಾಟ್‌ ಕೊಹ್ಲಿ (Virat Kohli) ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಮುರಿದು ವಿಶ್ವದಾಖಲೆ ನಿರ್ಮಿಸಿದ್ದಾರೆ.ಐಸಿಸಿಯ ಒಂದು ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಗೆ ಕೊಹ್ಲಿ ಪಾತ್ರವಾಗಿದ್ದಾರೆ. ಇಲ್ಲಿಯವರೆಗೆ ಸಚಿನ್‌ ತೆಂಡೂಲ್ಕರ್‌ (Sachin Tendulkar) ಟೆಸ್ಟ್‌ ಕ್ರಿಕೆಟ್‌ನಲ್ಲಿ 51 ಶತಕ ಹೊಡೆದಿದ್ದರು. ಕೊಹ್ಲಿ ಇಂದು 102 ಎಸೆತಗಳಲ್ಲಿ 52ನೇ ಶತಕ ಸಿಡಿಸಿ ಸಚಿನ್‌ ದಾಖಲೆಯನ್ನು ಮುರಿದರು.

ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರು:

52 – ವಿರಾಟ್‌ ಕೊಹ್ಲಿ(ಏಕದಿನ)

51 – ಸಚಿನ್‌ ತೆಂಡೂಲ್ಕರ್‌(ಟೆಸ್ಟ್‌)

49 – ಸಚಿನ್ ತೆಂಡೂಲ್ಕರ್ (ಏಕದಿನ)45 – ಜಾಕ್ವೆಸ್ ಕಾಲಿಸ್ (ಟೆಸ್ಟ್)

41 – ರಿಕಿ ಪಾಂಟಿಂಗ್ (ಟೆಸ್ಟ್)

ವಿರಾಟ್‌ ಕೊಹ್ಲಿ 48 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೆ 102 ಎಸೆತಗಳಲ್ಲಿ ಶತಕ ಹೊಡೆದರು. ಅಂತಿಮವಾಗಿ ಕೊಹ್ಲಿ 130 ರನ್‌(11 ಬೌಂಡರಿ, 7 ಸಿಕ್ಸ್‌) ಹೊಡೆದು ಔಟಾದರು.

Comments are closed.