Modi: 77 ಅಡಿ ಎತ್ತರದ ಶ್ರೀರಾಮನ ಕಂಚಿನ ವಿಗ್ರಹ ಅನಾವರಣಗೊಳಿಸಿದ ಪ್ರಧಾನಿ ಮೋದಿ

Share the Article

Modi: ದಕ್ಷಿಣ ಗೋವಾದ ಕಾಣಕೋಣ ಬಳಿಯ ಪರ್ತಗಾಳಿಯಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದ 550ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಠದ ಆವರಣದಲ್ಲಿ ಸ್ಥಾಪಿಸಲಾಗಿರುವ 77 ಅಡಿ ಎತ್ತರದ ಶ್ರೀರಾಮನ ಕಂಚಿನ ವಿಗ್ರಹವನ್ನು ಶುಕ್ರವಾರ ಅನಾವರಣಗೊಳಿಸಿದರು.

ಗುಜರಾತಿನ ಏಕತಾ ವಿಗ್ರಹವನ್ನು ವಿನ್ಯಾಸಗೊಳಿಸಿದ್ದ ಶಿಲ್ಪಿ ರಾಮ ಸುತಾರ್ ಅವರು ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಿದ್ದಾರೆ ಎಂದು ಗೋವಾದ ಪಿಡಬ್ಲ್ಯುಡಿ ಸಚಿವ ದಿಗಂಬರ ಕಾಮತ್ ಹೇಳಿದರು. ಇದು ವಿಶ್ವದಲ್ಲಿಯೇ ಶ್ರೀರಾಮನ ಅತ್ಯಂತ ಎತ್ತರದ ಪ್ರತಿಮೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.

Comments are closed.