Puttur: ಪುತ್ತೂರು: ಜಿಲ್ಲಾ ಮಟ್ಟದ ಸ್ವಚ್ಛ ಏವಂ ಹರಿತ್ ವಿದ್ಯಾಲಯ ರೇಟಿಂಗ್ ನಲ್ಲಿ ಪಿಎಂಶ್ರೀ ವೀರಮಂಗಲ ಶಾಲೆಗೆ 5 ಸ್ಟಾರ್

Puttur: ದ.ಕ ಜಿಲ್ಲಾ ಸ್ವಚ್ಛ ಏವಂ ಹರಿತ್ ವಿದ್ಯಾಲಯ ನಡೆಸಿದ ಶುದ್ಧಕುಡಿಯುವ ನೀರು, ಶೌಚಾಲಯ ಬಳಕೆ, ನೀರು ಇಂಗಿಸುವಿಕೆ,ಸೋಲಾರ್ ಬಳಕೆ,ಕೈ ತೊಳೆಯುವ ಘಟಕ,ಶಾಲಾ ಸ್ವಚ್ಛತೆಗೆ ಸಂಬಂಧಿಸಿದ ಬೃಹತ್ ಸಮೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ಪಿಎಂಶ್ರೀ ವೀರಮಂಗಲ ಶಾಲೆಯು 93.60 ಅಂಕಗಳನ್ನು ಪಡೆದು ದ.ಕ ಜಿಲ್ಲೆಯಿಂದ ಆಯ್ಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಯವರ ನೇತ್ರತ್ವದಲ್ಲಿ ನಡೆದ ಆಯ್ಕೆ ಸಮಿತಿಯು ಜಿಲ್ಲೆಯಿಂದ 8 ಶಾಲೆಗಳನ್ನು ಆಯ್ಕೆ ಮಾಡಿ ರಾಜ್ಯ ಹಂತಕ್ಕೆ ಕಳುಹಿಸಿದೆ. ಪುತ್ತೂರು ತಾಲೂಕಿನಿಂದ ಸ್ವಚ್ಛ ಶಾಲೆಯೆಂದು ಏಕೈಕ ಶಾಲೆಯಾಗಿ ವೀರಮಂಗಲ ಪಿಎಂಶ್ರೀ ಶಾಲೆ ಹೊರಹೊಮ್ಮಿದೆ. ಈಗಾಗಲೆ ಅತ್ಯುತ್ತಮ ಪಿಎಂಶ್ರೀ ಶಾಲೆ,ಅತ್ಯುತ್ತಮ ಎಸ್ ಡಿ ಎಂ ಸಿ ಯೆಂದು ಗೌರವ ಪಡೆದ ಶಾಲೆಗೆ ಇನ್ನೊಂದು ಗರಿ ಮುಡಿಗೇರಿದೆ.
Comments are closed.