Gold -Silver : ಆಭರಣಪ್ರಿಯರಿಗೆ ಬೆಳ್ಳಂಬೆಳಗ್ಗೆ ಶಾಕ್ – ಚಿನ್ನದ ಬೆಲೆ 10 ಗ್ರಾಂಗೆ ₹3,500, ಬೆಳ್ಳಿ ಬೆಲೆ ₹5,800 ಹೆಚ್ಚಳ!!

Gold-Silver Price : ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗಾಗಲೇ ಚಿನ್ನದ ದರ 10 ಗ್ರಾಂಗೆ ಒಂದು ಲಕ್ಷವನ್ನು ಮೀರಿ ಏರಿಕೆ ಕಂಡಿದೆ. ಇದರ ಬೆದ್ನಲ್ಲೇ ಬೆಳ್ಳಿ ದರವು ಕೂಡ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಇದೆಲ್ಲದರ ನಡುವೆ ಇದೀಗ ಶಾಕಿಂಗ್ ನ್ಯೂಸ್ ಒಂದು ಬಂದಿದ್ದು ಚಿನ್ನದ ಬೆಲೆ 10 ಗ್ರಾಂಗೆ ₹3,500, ಬೆಳ್ಳಿ ಬೆಲೆ ಕೆ.ಜಿ.ಗೆ ₹5,800 ಹೆಚ್ಚಳವಾಗಿದೆ.

ಹೌದು, ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ₹3,500ರಷ್ಟು ಹೆಚ್ಚಾಗಿದ್ದು ₹1,28,900ಕ್ಕೆ ತಲುಪಿದೆ. ಶೇ 99.5ರಷ್ಟು ಶುದ್ಧತೆಯ ಆಭರಣ ಚಿನ್ನದ ಬೆಲೆಯು 10 ಗ್ರಾಂ ₹3,500ರಷ್ಟು ಹೆಚ್ಚಾಗಿ ₹1,28,300ಕ್ಕೆ ತಲುಪಿದೆ. ಬೆಳ್ಳಿಯ ಖರೀದಿ ಕೂಡ ಹೆಚ್ಚಾಗಿದ್ದು ಬೆಲೆಯು ಕೆ.ಜಿ.ಗೆ ₹5,800ರಷ್ಟು ಹೆಚ್ಚಳ ಕಂಡಿದೆ. ಕೆ.ಜಿ. ಬೆಳ್ಳಿಯ ಬೆಲೆಯು ₹1,60,800 ಆಗಿದೆ.
ಅಂದಹಾಗೆ ಮದುವೆಗಳ ಋತು ಶುರುವಾಗುತ್ತಿರುವ ಕಾರಣದಿಂದಾಗಿ ಸ್ಥಳೀಯ ಚಿನ್ನಾಭರಣ ಅಂಗಡಿಗಳ ಪ್ರತಿನಿಧಿಗಳು ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
Comments are closed.