Kadaba: ಕಡಬ: ಶೇಂದಿ ಇಳಿಸಲು ತೆಂಗಿನ ಮರವೇರಿದ್ದ ವ್ಯಕ್ತಿ ಮರದಲ್ಲೇ ಮೃತ್ಯು

Kadaba: ವ್ಯಕ್ತಿಯೋರ್ವರು ಶೇಂದಿ ಇಳಿಸಲು ತೆಂಗಿನ ಮರವೇರಿದ್ದ ಸಂದರ್ಭ ಮರದಲ್ಲೇ ಮೃತ ಪಟ್ಟ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದಲ್ಲಿ ನಡೆದಿದೆ.

ಕೊಲ್ಲಮೊಗ್ರು ಬಳಿಯ ವ್ಯಕ್ತಿಯೋರ್ವರ ಜಾಗದ ತೆಂಗಿನ ಮರದಿಂದ ಕೇರಳ ಮೂಲದ ವ್ಯಕ್ತಿಯೊಬ್ಬರು ಶೇಂದಿ ಮೂರ್ತೆ ನಡೆಸುತ್ತಿದ್ದರು. ಎಂದಿನಂತೆ ಸೋಮವಾರ ಕೂಡಾ ಶೇಂದಿ ಇಳಿಸಲು ಮರ ಹತ್ತಿದ್ದ ಅವರು ಅಲ್ಲೇ ಅಸ್ವಸ್ಥಗೊಂಡು ಬೊಬ್ಬೆ ಹಾಕಿದರೆನ್ನಲಾಗಿದೆ.
ಬಳಿಕ ಅಗ್ನಿ ಶಾಮಕ ದಳದವರು ಬಂದಾಗ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಸ್ಥಳೀಯರ ಸಹಕಾರದಿಂದ ಮೃತ ದೇಹವನ್ನು ಕೆಳಗಿಳಿಸಲಾಯಿತೆಂದು ತಿಳಿದು ಬಂದಿದೆ.
Comments are closed.