ಎಸೆಸೆಲ್ಸಿ ಪರೀಕ್ಷೆ: ನೋಂದಣಿ ದಿನಾಂಕ ವಿಸ್ತರಣೆ, ನ.29ರವರೆಗೆ ಅವಕಾಶ

ಬೆಂಗಳೂರು: ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆ-1ರ ನೋಂದಣಿಗೆ ನ. 29ರ ವರೆಗೆ ಅವಧಿ ವಿಸ್ತರಿಸಲಾಗಿದೆ. ಸರಕಾರಿ ಶಾಲೆಗಳ, ಅನುದಾನಿತ, ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು, ಪುನರಾವರ್ತಿತ ವಿದ್ಯಾರ್ಥಿಗಳು ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ನೋಂದಣಿ ಅಂತಿಮ ದಿನಾಂಕಕ್ಕೆ ಇನ್ನೊಂದು ವಾರ ಮಾತ್ರ ಬಾಕಿಯಿದ್ದು, ಜರೂರು ಪ್ರಕ್ರಿಯೆ ಪೂರ್ಣಗೊಳಿಸಲು ಕೋರಲಾಗಿದೆ.

Comments are closed.