ಹಳೆ ಅಡಿಕೆ, ಸಿಂಗಲ್ ಚೋಲ್: ಧಾರಣೆ ಏರಿಕೆಯ ಹಾದಿಯಲ್ಲಿ

Share the Article

ಪುತ್ತೂರು: ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ, ಡಬ್ಬಲ್ ಚೋಲ್ ಧಾರಣೆಯಲ್ಲಿ ಚೇತರಿಕೆ ಕಂಡು ಬಂದಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರು ಸೂಚನೆ ಕಂಡು ಬಂದಿದೆ.
ವಿಶೇಷವೆಂದರೆ ಈ ಬಾರಿ ಕ್ಯಾಂಪ್ಕೊ ಮತ್ತು ಹೊರ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಪೈಪೋಟಿ ಕಂಡು ಬಂದಿದ್ದು, ಚಾಲಿ ಅಡಿಕೆ ಬೆಳೆಗಾರರು ಕಾದು ನೋಡಲು ನಿರ್ಧರಿಸಿದ್ದಾರೆ. ಈಗ ಅಡಿಕೆಗೆ ಬೇಡಿಕೆ ಜಾಸ್ತಿ ಇದ್ದು ಆದರೆ ಪೂರೈಕೆ ಕೊರತೆ ಉಂಟಾಗಿರುವುದು ಸ್ಪಷ್ಟ. ಮುಖ್ಯವಾಗಿ ಕೊರತೆಯೇ ಧಾರಣೆ ಏರಿಕೆಗೆ ಕಾರಣಗಳಲ್ಲಿ ಒಂದಾಗಿದೆ.

ಬೆಲೆ ಹೇಗಿದೆ?
ಕಳೆದ ಎರಡು ದಿನಗಳ ಹಿಂದೆ ಕ್ಯಾಂಪ್ಕೊದಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 390 ರೂ. ಇದ್ದದ್ದು , ನಿನ್ನೆ ವೇಳೆಗೆ ಅಂದರೆ ನ. 20ಕ್ಕೆ 400ಕ್ಕೆ ಏರಿದೆ. ಆದರೆ ಹೊರ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಧಾರಣೆ ಹೆಚ್ಚು ಇರುವಂತೆ ನಿನ್ನೆಯೂ 410 ರೂ. ತನಕವೂ ಇತ್ತು. ಆದರೆ ಹಳೆಯಡಿಕೆ ಧಾರಣೆಯು ಕ್ಯಾಂಪ್ಲೋದಲ್ಲಿ 540 ರೂ. ಇದ್ದರೆ, ಹೊರಗೆ 550 ರೂ. ತನಕವೂ ಇತ್ತು. ಉಳಿದಂತೆ ಸಿಂಗಲ್ ಚೋಲ್ ಧಾರಣೆ ಸ್ಥಿರವಾಗಿ ನಿಂತಿದೆ.

ಕರಿಗೋಟಿಗೂ ಬೇಡಿಕೆ:
ಪಟೋರಾಕ್ಕೆ (ಹೊಸ) ಕೆ.ಜಿ.ಗೆ 330 ರೂ., ಹಳೆ ಪಟೋರಾಕ್ಕೆ 410 ರೂ. ಕರಿಗೋಟಿಗೆ (ಹೊಸ) 260 ರೂ., ಹಳೆ ಕರಿಗೋಟಿಗೆ 260 ರೂ. ಧಾರಣೆ ನಿಂತಿತ್ತು. ಈ ಸಲ ವಿಪರೀತ ಮಳೆ ಮತ್ತು ಆ ನಂತರ ಬಂದೆರಗಿದ ಶಿಲೀಂದ್ರ ಕೊಳೆ ರೋಗದ ಕಾರಣ ಇಳುವರಿ ಅರ್ಧಕ್ಕರ್ಧ ಕುಸಿದಿದೆ. ಹಾಗಾಗಿ ಪೂರೈಕೆಯ ಅಭಾವ ಸೃಷ್ಟಿಯಾಗಿ, ಸಹಜವಾಗಿ ಬೆಲೆಯಲ್ಲಿ ಏರುಮುಖ ಕಾಣಲಿದೆ ಅನ್ನೋದು ತಜ್ಞರ ಅಂದಾಜು.

Comments are closed.