Chikkamagaluru: ಚಿಕ್ಕಮಗಳೂರಿನಲ್ಲಿ 5 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ!

Chikkamagaluru: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವಪುರ ಸಮೀಪದ ನವಿಲುಗುಡ್ಡದ ಬಂಡೆಯ ಬಳಿ ತೋಟದ ಮನೆಯ ಎದುರು ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಚಿರತೆ ಹೊತ್ತೊಯ್ದ ಘಟನೆ ನಡೆದಿದೆ.

ಬೆಂಗಳೂರಿನ ರಾಮಚಂದ್ರಪ್ಪ ಎಂಬುವರಿಗೆ ಸೇರಿದ ಅಡಿಕೆ ತೋಟದಲ್ಲಿ ಧಾರವಾಡದ ಈ ದಂಪತಿ ಕೆಲಸ ಮಾಡಿಕೊಂಡಿದ್ದಾರೆ.ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಎಳೆದೊಯ್ದಿದ್ದು, ಸದ್ಯ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಬಸವರಾಜ ಮತ್ತು ರೇಣುಕಾ ದಂಪತಿಯ ಪುತ್ರಿ ಸಾನ್ವಿಯನ್ನು ಚಿರತೆ ಹೊತ್ತೊಯ್ದಿದಿತ್ತು. ಇದೀಗ ಪೊಲೀಸರು ಮತ್ತು ಅರಣ್ಯಇಲಾಖೆ ಸಿಬ್ಬಂದಿಗಳು ಬಾಲಕಿಯ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.
Comments are closed.