ಮುಷ್ಟಿ ಒಳಗೆ ಕೂರದ ಮೊಟ್ಟೆ: ಬೆಲೆ 8 ರೂಪಾಯಿ

ಮಂಗಳೂರು: ಮೊಟ್ಟೆ ಕೈಯಿಂದ ತಪ್ಪಿಸಿಕೊಳ್ಳುತ್ತಿದೆ. ಎರಡು ವಾರದಿಂದ ಏರಿಕೆಯನ್ನು ಕಾಣುತ್ತ ಬಂದಿದ್ದ ಮೊಟ್ಟೆ ದರ ಈಗ ದಾಖಲೆ ಬೆಲೆ ಗ್ರಾಹಕರಿಗೆ 8ಕ್ಕೆ ತಲುಪಿದೆ. ಮೊನ್ನೆ ಮೊನ್ನೆಯ ತನಕ 7 ರೂಪಾಯಿಗೆ ಸಿಗುತ್ತಿದ್ದ ಮೊಟ್ಟೆ ಈಗ, ಏಕಾಏಕಿ ಬರೋಬ್ಬರಿ 14 ಪ್ರತಿಶತ ಬೆಲೆ ಹಿಗ್ಗಿಸಿಕೊಂಡುಬಿಟ್ಟಿದೆ. ಕಳೆದ ಸೋಮವಾರ ಏಳು ರೂಪಾಯಿಗೆ ಮೊಟ್ಟೆ ಸಿಗುತ್ತಿತ್ತು. ಆದರೆ, ಗುರುವಾರದ ಆಸುಪಾಸಿನಲ್ಲಿ ರಖಂ ಬೆಲೆಯಲ್ಲಿ 6.8 ರೂಪಾಯಿ ಆಯಿತು. ಮಂಗಳವಾರ 7ಕ್ಕೆ ಮತ್ತು ನಿನ್ನೆ ಗುರುವಾರ 7.20ಕ್ಕೆ ತಲುಪಿದೆ. ಸರಿ

ಸುಮಾರು ಇದೇ ಸಮಯಕ್ಕೆ ಕಳೆದ ವರ್ಷ 6.90ಕ್ಕೆ ಚಿಲ್ಲರೆ ದರದಲ್ಲಿ ಮಾರಾಟವಾಗಿತ್ತು. ಮತ್ತಷ್ಟು ಬೆಲೆ ಏರಿಕೆ ನಿರೀಕ್ಷೆಯಲ್ಲಿ ಮುಂದೆ ಒಟ್ಟೊಟ್ಟಿಗೇ ಬರಲಿರುವ ಹೊಸವರ್ಷ, ಕ್ರಿಸ್ಟಸ್ ಆಚರಣೆ ಮತ್ತು ಕೇಕ್ ಮತ್ತಿತರ ಖಾದ್ಯ ತಯಾರಿಕೆಯ ಕಾರಣ ಮೊಟ್ಟೆ ಬೆಲೆಯಲ್ಲಿ ಇನ್ನೂ ಏರಿಕೆಯಾಗುವ ಸಂಭವವಿದೆ. ಬೇಡಿಕೆ ಜಾಸ್ತಿ ಮಾತ್ರವಲ್ಲ, ಮೊಟ್ಟೆ ಉತ್ಪಾದನೆ ಕೂಡಾ ಕಡಿಮೆಯಾಗಿದೆ. ಶಾಲೆ ಅಂಗನವಾಡಿಗಳಲ್ಲಿ ಬಿಸಿಯೂಟದ ಮಧ್ಯೆ ಮೊಟ್ಟೆ ಕೊಡುವ ಕಾರಣ ಬೇಡಿಕೆ ಜಾಸ್ತಿಯಾಗಿದೆ.
ಇನ್ನು ಕೋಳಿ ಆಹಾರ ಪದಾರ್ಥದಲ್ಲಿ ಬೆಲೆ ಏರಿಕೆ ಆಗಿದ್ದು, ಕೆಲವು ಸ್ಥಳೀಯ ಕೋಳಿಫಾರಂಗಳು ಮುಚ್ಚಿವೆ. ಲೋಕಲ್ ಉತ್ಪಾದನೆ ಕಡಿಮೆಯಾದ ದೂರದ ಮೈಸೂರಿನಿಂದ ಮೊಟ್ಟೆಗಳು ಮಂಗಳೂರು ಪ್ರದೇಶಕ್ಕೆ ಬರುತ್ತಿವೆ. ಹಾಗಾಗಿ ಸಾರ್ವತ್ರಿಕವಾಗಿ ಡಿಮ್ಯಾಂಡ್ ಏರಿಕೆ ಸಪ್ಲೈ ಕೊರತೆಯ ಕಾರಣ.ಬೆಲೆ ಏರಿಕೆ ಆಗಿದೆ ಎನ್ನಲಾಗಿದೆ.
Comments are closed.