Traffic rules: ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ದಂಡ ಫಿಕ್ಸ್

Traffic rules: 6 ವರ್ಷ ಮೇಲ್ಪಟ್ಟ ಮಕ್ಕಳನ್ನು ಬೈಕ್ನಲ್ಲಿ ಕರೆದೊಯ್ಯುವಾಗ ಕಡ್ಡಾಯವಾಗಿ ಹೆಲ್ಮೆಟ್ (Helmet) ಧರಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ. ಮಕ್ಕಳು ದ್ವಿಚಕ್ರ ವಾಹನಗಳಲ್ಲಿ (Traffic Rules) ಸವಾರಿಯಾಗಿರುವಾಗ ಹೆಲ್ಮೆಟ್ ಧರಿಸಬೇಕು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು.ಇದನ್ನು ಜಾರಿಗೆ ತರಲು ಕೇಂದ್ರ ಮೋಟಾರು ವಾಹನ ನಿಯಮ 2022 ರ ನಿಯಮ 138 ಅನುಸಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರೊಫೆಸರ್ ಹಾಗೂ ಮುಖ್ಯಸ್ಥರಾದ ಅರ್ಚನಾ ಭಟ್ ಕೆ. ಅವರು 2023ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚರವರ ನ್ಯಾಯಪೀಠ, ಕ್ರಮಾತ್ಮಕ ಸೂಚನೆ ನೀಡಿ ಅರ್ಜಿಯನ್ನು ಮುಕ್ತಾಯಗೊಳಿಸಿದೆ.
ನ್ಯಾಯಪೀಠವು ಗಮನಿಸಿದಂತೆ, ಅಧಿಕಾರಿಗಳು ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಜಾರಿಗೆ ತರಲು ಕೆಲವು ಕ್ರಮಗಳನ್ನು ತೆಗೆದುಕೊಂಡರೂ, ಅವು ವಾಸ್ತವವಾಗಿ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ಹೀಗಾಗಿ, ಸರ್ಕಾರವು ಈ ನಿಯಮಗಳನ್ನು ತಕ್ಷಣ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ತರುವ ಅಗತ್ಯವಿದೆ ಎಂದು ಪೀಠವು ಸೂಚಿಸಿದೆ.ನಿಯಮ ಜಾರಿಗೊಳಿಸುವ ಮೊದಲು ಮಾರುಕಟ್ಟೆಯಲ್ಲಿ ಸುರಕ್ಷತಾ ಪರಿಕರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನ್ಯಾಯಪೀಠವು 6 ತಿಂಗಳ ಸಮಯಾವಕಾಶವನ್ನು ನೀಡಿತ್ತು.ಇದಲ್ಲದೆ, 9 ತಿಂಗಳಿಂದ ನಾಲ್ಕು ವರ್ಷದೊಳಗಿನ ಮಗುವನ್ನು ಹಿಂಬದಿ ಸವಾರನಾಗಿ ಸಾಗಿಸುವಾಗ ಮೋಟಾರ್ ಸೈಕಲ್ ಸವಾರನು ಹೆಲ್ಮೆಟ್ ಧರಿಸಬೇಕು ಮತ್ತು ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಸಂಬಂಧ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬೇಕು ಎಂಬ ನಿರ್ದೇಶನವನ್ನು ಕೂಡ ಪೀಠವು ನೀಡಿದೆ.ವಿಚಾರಣೆಯ ವೇಳೆ, ಸರ್ಕಾರದ ಪರ ವಕೀಲರು ತಯಾರಕರಿಂದ ಪಡೆದ ಮಾಹಿತಿಯನ್ನು ಉಲ್ಲೇಖಿಸಿ, ಹೊಸ ಸುರಕ್ಷತಾ ಪರಿಕರಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೊದಲು ಎಲ್ಲಾ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕು ಎಂದು ಪೀಠಕ್ಕೆ ತಿಳಿಸಿದರು. ಆದ್ದರಿಂದ, ಈ ಪರಿಕರಗಳ ತಯಾರಿಕೆ ಮತ್ತು ಲಭ್ಯತೆಗೆ ಬೇಕಾದ ಸಮಯವನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
ಹೊಸ ನಿಯಮಗಳ ಪ್ರಕಾರ, ಮಕ್ಕಳಿಗಾಗಿ ಸುರಕ್ಷತಾ ಸಲಕರಣೆಗಳನ್ನು ಧರಿಸುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) 2022 ರ ಸೆಕ್ಷನ್ 138(7) ಅಡಿ ಪರಿಚಯಿಸಲಾಗಿದೆ.ಅಲ್ಲದೇ, ಫೆಬ್ರವರಿ 15, 2022ರಂದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129 ಅಡಿಯಲ್ಲಿ ಜಾರಿಗೆ ತಂದಲಾಗಿದೆ. ಜೊತೆಗೆ, ನಾಲ್ಕು ವರ್ಷದೊಳಗಿನ ಮಗುವನ್ನು ಹಿಂಬದಿ ಸವಾರನಾಗಿ ಸಾಗಿಸುವಾಗ ಮೋಟಾರ್ಸೈಕಲ್ ವೇಗವು ಗಂಟೆಗೆ 40 ಕಿಮೀಗಿಂತ ಹೆಚ್ಚು ಇರಬಾರದು ಎಂದು ಹೊಸ ನಿಯಮಗಳು ತಿಳಿಸಲಿವೆ.
Comments are closed.