Sabarimala: ಶಬರಿಮಲೆ ಮಾಲೆ ಹಾಕಿದ್ದಕ್ಕೆ ಕಾಲೇಜಿನಿಂದ ವಿದ್ಯಾರ್ಥಿಗೆ ಗೇಟ್‌ಪಾಸ್

Sabarimala: ಶಬರಿಮಲೆ (Sabarimala) ಮಾಲೆ ಧರಿಸಿದ ಕಾರಣಕ್ಕೆ ವಿದ್ಯಾರ್ಥಿಯೊಬ್ಬನನ್ನ ಪ್ರಿನ್ಸಿಪಾಲ್ ಕಾಲೇಜಿನಿಂದ ಹೊರಗೆ ಹಾಕಿರುವ ಘಟನೆ ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಿನ ಕಡ್ಲೆಮಕ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಈ ಬಾರಿಗೆ ಮೊದಲ ಸಲ ಶಬರಿಮಲೆ ಮಾಲೆಯನ್ನ ಧರಿಸಿಕೊಂಡು ಕಾಲೇಜಿಗೆ ಹೋಗಿದ್ದ. ಈ ಸಮಯದಲ್ಲಿ ಕಾಲೇಜಿನ ಆಡಳಿತ ಮಂಡಳಿ ಇದನ್ನ ವಿರೋಧ ಮಾಡಿದ್ದು, ನೀವು ಮಾಲೆ ತೆಗೆದು ಒಳಗೆ ಬಾ, ಇಲ್ಲದಿದ್ದರೆ ಬರುವುದೇ ಬೇಡ ಎಂದು ಹೇಳಿದ್ದು, ಆತನನ್ನ ಕಾಲೇಜಿನಿಂಡ ಹೊರಗೆ ಹಾಕಿದೆ. ಎಲ್ಲಾ ವಸ್ತುಗಳನ್ನ ತೆಗೆದು ಬ್ಯಾಗ್‌ನಲ್ಲಿ ಇಟ್ಟುಕೊಂಡು ಒಳಗೆ ಬರಬಹುದು ಎಂದು ತಿಳಿಸಿದ್ದು, ಆ ವಿದ್ಯಾರ್ಥಿಯನ್ನ ಕಾಲೇಜಿನ ಕ್ಯಾಂಪಸ್‌ನಿಂದ ಹೊರಗೆ ಕಳುಹಿಸಿದ್ದಾರೆ.
ಕಾಲೇಜಿಗೆ ಬಂದ ಹಿರಿಯ ಮಾಲಾಧಾರಿಗಳು ಹಾಗೂ ಪೊಲೀಸರು:
ಇನ್ನು ಕಾಲೇಜು ಆಡಳಿತ ಮಂಡಳಿ ಮಾಲೆ ತೆಗೆಯಲು ಹೇಳಿದಾಗ ವಿದ್ಯಾರ್ಥಿ ಸಹ ವಿರೋಧ ವ್ಯಕ್ತಪಡಿಸಿದ್ದು, ಮಾಲಾಧಾರಿ ನಾನು ತೆಗೆಯುವುದಿಲ್ಲ ಎಂದು ಹೇಳಿದ್ದಾನೆ. ಈ ವಿಚಾರ ತಿಳಿದ ಹಿರಿಯ ಮಾಲಾಧಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಕಾಲೇಜಿಗೆ ಹೋಗಿದ್ದಾರೆಪೊಲೀಸರು ಹಾಗೂ ಹಿರಿಯ ಮಾಲಾಧಾರಿಗಳು ಬಂದು ಹೋದ ನಂತರ ಕಾಲೇಜು ಆಡಳಿತ ಮಂಡಳಿ ಸಹ ಸುಮ್ಮನಾಗಿದ್ದು, ವಸ್ತ್ರವನ್ನ ಸೊಂಟಕ್ಕೆ ಕಟ್ಟಿಕೊಳ್ಳುವಂತೆ ತಿಳಿಸಿದ್ದಾರೆ.
Comments are closed.