Bangalore: ರಕ್ಷಿತಾ ಶೆಟ್ಟಿ ಸೇರಿ ಹಲವರ ವಿರುದ್ಧ ಅಶ್ಲೀಲ ಹಾಡು ರಚಿಸುತ್ತಿದ್ದ ವ್ಯಕ್ತಿ ಮೇಲೆ ಬಿತ್ತು ಕೇಸ್‌

Share the Article

Bangalore: ಬಿಗ್‌ ಬಾಸ್‌ ಸ್ಪರ್ಧಿ ರಕ್ಷಿತಾ ಶೆಟ್ಟಿ (Rakshita Shetty), ನಿವೇದಿತಾ ಗೌಡ (Niveditha Gowda), ಸೋನು ಗೌಡ (Sonu Srinivas Gowda)ಸೇರಿದಂತೆ ಅನೇಕರ ವಿರುದ್ಧ ಅಶ್ಲೀಲವಾಗಿ ಹಾಡು ಬರೆದು ಹರಿಯ ಬಿಡುತ್ತಿದ್ದ ವ್ಯಕ್ತಿ ಮೇಲೆ ಕೇಸ್‌ ದಾಖಲಾಗಿದೆ.

jewinson ಎಂಬಾತ ಅಶ್ಲೀಲವಾಗಿ ಹಾಡು ಬರೆದು ಯೂಟ್ಯೂಬ್‌, ಇನ್‌ಸ್ಟಾದಲ್ಲಿ ವಿಡಿಯೋ ಅಪ್ಲೋಡ್‌ ಮಾಡುತ್ತಿದ್ದ. ಈತನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ ರಾಜ್ಯ ಮಹಿಳಾ ಆಯೋಗ (State Women Commission) ಪ್ರಕರಣವನ್ನು ಸೈಬರ್‌ ತಂಡಕ್ಕೆ ವರ್ಗಾವಣೆ ಮಾಡಿ ಖಾತೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ.ಈತ ರಕ್ಷಿತಾ ಶೆಟ್ಟಿ, ನಿವೇದಿತಾ ಗೌಡ, ಸೋನುಗೌಡ ಸೇರಿದಂತೆ ಹಲವರು ಅಪ್ಲೋಡ್‌ ಮಾಡಿದ ವಿಡಿಯೋವನ್ನು ಡೌನ್‌ಲೋಡ್‌ ಮಾಡಿ ಅಶ್ಲೀಲ ಸಾಹಿತ್ಯವನ್ನು ರಚಿಸಿ ತನ್ನ ಖಾತೆಯಲ್ಲಿ ಅಪ್ಲೋಡ್‌ ಮಾಡುತ್ತಿದ್ದ. ಈ ವಿಡಿಯೋಗಳು ಲಕ್ಷಾಂತರ ವ್ಯೂ ಪಡೆಯುತ್ತಿದ್ದವು. ನೆಟ್ಟಿಗರು ಈತನ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ದೂರಿನಲ್ಲಿ ಏನಿದೆ?

jewinsonlewis ಎಂಬಾತ ತನ್ನ ಇನಸ್ಟಾಗಾಮ್ ಖಾತೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ವೀಡಿಯೋ, ಹಾಡು ಹಾಗೂ ಸಂದೇಶಗಳನ್ನು ಹಾಕಿರುವುದು ರಾಜ್ಯ ಮಹಿಳಾ ಆಯೋಗದ ಗಮನಕ್ಕೆ ಬಂದಿರುತ್ತದೆ. ರಾಜ್ಯ ಮಹಿಳಾ ಆಯೋಗವು ಮಹಿಳೆಯರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದು, ಹೆಣ್ಣಿನ ಮಾನ ಹಾಗೂ ಪ್ರಾಣವನ್ನು ಕಾಪಾಡುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಹೆಣ್ಣು ಮಕ್ಕಳ ಬಗ್ಗೆ ಈ ರೀತಿ ವೀಡಿಯೋ ಹಾಕಿ ಪೋಸ್ಟ್ ಮಾಡಿ ಅಶ್ಲೀಲ ಸಂದೇಶಗಳನ್ನು ಸಮಾಜಕ್ಕೆ ನೀಡಿರುವುದನ್ನು ರಾಜ್ಯ ಮಹಿಳಾ ಆಯೋಗವು ತೀವ್ರವಾಗಿ ಖಂಡಿಸಿ, ಗಂಭೀರವೆಂದು ಪರಿಗಣಿಸಿರುತ್ತದೆ. (www.youtube.com/@jewinsonkannadiga) ಆದ್ದರಿಂದ ಆತನ ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ ಅಶ್ಲೀಲ ವೀಡಿಯೋಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ಮುಂದೆ ಯಾರೂ ಇಂಥಹ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಭಿತ್ತರಿಸದಂತೆ ಕ್ರಮ ಕೈಗೊಂಡು ವರದಿಯನ್ನು ಅತೀ ಶೀಘ್ರದಲ್ಲಿ ಆಯೋಗಕ್ಕೆ ಕಳುಹಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದೆ.

Comments are closed.