Jio: ಜಿಯೋ ಗ್ರಾಹಕರಿಗೆ ಬ್ಯಾಡ್ ನ್ಯೂಸ್ – ಇನ್ಮುಂದೆ ಇರಲ್ಲ ಈ ರೀಚಾರ್ಜ್‌ ಪ್ಲಾನ್‌

Share the Article

Jio: ಜಿಯೋ (Jio) ಈಗ ಗ್ರಾಹಕರಿಗೆ ಒಂದಾದ್ಮೇಲೆ ಒಂದರಂತೆ ಶಾಕ್ ನೀಡ್ತಿದೆ. ಇದೀಗ ಜಿಯೋ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮೇಲೆ ಜನರ ನೆಚ್ಚಿನ ರೀಚಾರ್ಜ್‌ ಯೋಜನೆಗೆ ಬ್ರೇಕ್‌ ಹಾಕಲಿದೆ.

ಹೌದು, ರಿಲಯನ್ಸ್‌ ಜಿಯೋ ಆಗಸ್ಟ್ 18 ರಿಂದ ತನ್ನ ಎಂಟ್ರಿ-ಲೆವೆಲ್ ಪ್ಲಾನ್ (1 GB/ದಿನ, ₹249, 28 ದಿನಗಳು) ನಿಲ್ಲಿಸುವುದಾಗಿ ಘೋಷಿಸಿದೆ.

ಜಿಯೋನ ಹೊಸ ಬದಲಾವಣೆಯಿಂದಾಗಿ ಈಗಾಗಲೇ 28 ದಿನಗಳ 1 ಜಿಬಿ ರೀಚಾರ್ಜ್‌ ಪ್ಲಾನ್ ಬಳಸುತ್ತಿದ್ದ ಗ್ರಾಹಕರಿಗೆ ನಿರಾಸೆ ಉಂಟಾಗಿದೆ. ಅಲ್ಲದೇ ಇನ್ಮೇಲೆ ₹299 ಪ್ಲಾನ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಈ ಹೊಸ ಪ್ಲಾನ್ ದಿನಕ್ಕೆ 1.5 GB ಡೇಟಾ ಮತ್ತು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಜಿಯೋ ವೆಬ್‌ಸೈಟ್‌ನಲ್ಲಿ ಈಗ 1.5 GB/ದಿನ ಅಥವಾ ಹೆಚ್ಚಿನ ಡೇಟಾ ಪ್ಯಾಕ್‌ಗಳು ಮಾತ್ರ ಲಭ್ಯವಿದ್ದು, ಅದಕ್ಕಿಂತ ಕಡಿಮೆ ಡೇಟಾ ಪ್ಲಾನ್‌ಗಳ ಆಯ್ಕೆಯನ್ನು ನೀಡಲಾಗಿಲ್ಲ. ಜಿಯೋ ಕಂಪನಿಯು ಈ ಪ್ಲಾನ್ ಗಳ ಬೆಲೆ ಏರಿಕೆ ಮಾಡುವ ಮೂಲಕ ಈಗಾಗಲೇ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದ 299 ರೂಪಾಯಿ ಪ್ಲಾನ್ 28 ದಿನಗಳ ವ್ಯಾಲಿಡಿಟಿಗೆ ಸಮಾನ ಯೋಜನೆಯನ್ನು ಜಾರಿಗೆ ತಂದಂತಾಗಿದೆ.

Comments are closed.