Shabarimala: ಶಬರಿಮಲೆಯಲ್ಲಿ ಭಾರೀ ಜನಸ್ತೋಮ: ವೃದ್ಧೆ ಸಾವು!

Share the Article

Shabarimala: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ (Ayyappa SwamyTemple) ಮಂಡಲ ಪೂಜೆ ಆರಂಭವಾಗಿದೆ. ಕಳೆದ ಭಾನುವಾರ ಸಂಜೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಾಗಿದ್ದು, ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಶಬರಿಮಲೈನಲ್ಲಿ ಅಯ್ಯಪ್ಪನ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ.ಒಂದೂವರೆ ದಿನದಲ್ಲಿ ಒಂದೂವರೆ ಲಕ್ಷ ಭಕ್ತರು (Devotees) ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಆದರೆ, ಭಾರೀ ಜನಸ್ತೋಮದಿಂದಾಗಿ ಪಂಪಾದಿಂದ ಶಬರಿಮಲೆಗೆ ತಲುಪಲು 7 ಗಂಟೆಗಳು ಬೇಕಾಗಿದ್ದು ಎಲ್ಲಿ ನೋಡಿದ್ರೂ ಜನಜಂಗುಳಿ ಇದೆ. ಅದರಲ್ಲೂ 18ನೇ ಮೆಟ್ಟಿಲು ಹತ್ತಲು ಭಕ್ತರಲ್ಲಿ ನೂಕು ನುಗ್ಗಲು ಶುರುವಾಗಿದೆ. ಈ ಮದ್ಯೆ, ಅಯ್ಯಪ್ಪನ ದರ್ಶನಕ್ಕೆ ಬರುತ್ತಿದ್ದ ಕೋಝಿಕ್ಕೋಡ್‌ನ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಪಂಪಾದಿಂದ ಅಪ್ಪಾಚಿಮೇಡು ತಲುಪಿದಾಗ ಕುಸಿದು ಬಿದ್ದ ಮಹಿಳೆ ಸಾವು ಕಂಡಿದ್ದಾರೆ.

Comments are closed.