Business Plan: ಕಡಿಮೆ ಹೂಡಿಕೆಯಲ್ಲಿ ಈ ಬಿಸಿನೆಸ್ ಆರಂಭಿಸಿ, ತಿಂಗಳಿಗೆ 90 ಸಾವಿರ ಆದಾಯ ಗಳಿಸಿ!!

Business Plan: ಕೈತುಂಬ ಸಂಬಳ ಪಡೆದು ನೆಮ್ಮದಿಯ ಜೀವನ ನಡೆಸಲು ವೈಟ್ ಕಾಲರ್ ಜಾಬ್ ಗಳೇ ಸಿಗಬೇಕು ಎಂದು ಇಲ್ಲ. ಇಂದು ದುಡಿಮೆಗೆ ಸಾಕಷ್ಟು ದಾರಿಗಳಿವೆ. ಆಧುನಿಕ ಕಾಲಘಟ್ಟದಲ್ಲಂತೂ ಉತ್ತಮ ಮಾರ್ಗದಲ್ಲಿ ನಡೆದರೆ ಯಾವುದೇ ಕೆಲಸವನ್ನು ಮಾಡಿಕೊಂಡರು ಜೀವನ ಸಾಗಿಸುವಷ್ಟು ಸುವರ್ಣ ಅವಕಾಶಗಳಿವೆ. ಅಂತೆಯೇ ಇದೀಗ ನಾವು ನಿಮಗೆ ಕಡಿಮೆ ಹೂಡಿಕೆ ಮಾಡಿ ಕೈ ತುಂಬಾ ಆದಾಯ ಗಳಿಕೆ ಮಾಡುವಂತಹ ಬಿಸಿನೆಸ್ ಬಗ್ಗೆ ಹೇಳಲಿದ್ದೇವೆ.

ಹೌದು, ಈ ವ್ಯವಹಾರದ ಮೂಲಕ ತಿಂಗಳಿಗೆ ₹90,000 ಗಳಿಸಬಹುದು. ಸದ್ಯದ ಬ್ಯುಸಿ ಲೈಫ್ಸ್ಟೈಲ್ನಲ್ಲಿ ಆರೋಗ್ಯಕರ ಮತ್ತು ರುಚಿಕರವಾದ ಮನೆ ಊಟ ನೀಡುವುದು ಉತ್ತಮ ವ್ಯವಹಾರವಾಗಿದೆ. ಕಡಿಮೆ ಹೂಡಿಕೆ ಮತ್ತು ಸರಳ ಅಡುಗೆಮನೆಯ ವ್ಯವಸ್ಥೆಯೊಂದಿಗೆ ನಿಮ್ಮ ನಗರ ಅಥವಾ ಪ್ರದೇಶದಲ್ಲಿ ಪ್ರತಿದಿನ ಟಿಫಿನ್ ಮತ್ತು ಊಟ ನೀಡುವ ಮೂಲಕ ಆದಾಯ ಸಂಪಾದಿಸಬಹುದು. ಕಡಿಮೆ ಹೂಡಿಕೆ ಮಾಡಿ ನಿಮಗೆ ತಿಂಗಳಿಗೆ 90 ಸಾವಿರಕ್ಕೂ ಹೆಚ್ಚು ಆದಾಯ ಗಳಿಸಬಹುದು. ಹಾಗಿದ್ರೆ ಎಷ್ಟು ಹೂಡಿಕೆ ಮಾಡಬೇಕು, ಪ್ರತಿ ತಿಂಗಳ ಖರ್ಚು ಎಷ್ಟಿರುತ್ತದೆ, ತಿಂಗಳ ಆದಾಯ ಹೇಗಿರುತ್ತದೆ ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಹೂಡಿಕೆಯ ವಿವರ:
ಅಡುಗೆಮನೆ ಸೆಟಪ್ ಮತ್ತು ಬಾಡಿಗೆ ಮುಂಗಡಕ್ಕೆ ₹1 ಲಕ್ಷ, ಸ್ಟೌವ್, ಫ್ರಿಡ್ಜ್, ಮಿಕ್ಸರ್ ಮತ್ತು ದೊಡ್ಡ ಪಾತ್ರೆಗಳಿಗೆ ₹1,20,000, ತರಕಾರಿ, ಅಕ್ಕಿ, ಎಣ್ಣೆ ಮತ್ತು ಮಸಾಲೆಗಳಿಗೆ ₹30,000, ಪ್ಯಾಕೇಜಿಂಗ್ಗೆ ₹20,000, ಲೋಗೋ ವಿನ್ಯಾಸ, ಪೋಸ್ಟರ್ ಮತ್ತು ಬ್ಯಾನರ್ಗಳಿಗೆ ₹15,000, ಸೆಕೆಂಡ್ ಹ್ಯಾಂಡ್ ಸ್ಕೂಟರ್ ಅಥವಾ ಡೌನ್ಪೇಮೆಂಟ್ಗೆ ₹50,000, ಪರವಾನಗಿ ಮತ್ತು ರಿಜಿಸ್ಟರ್ಗಳಿಗೆ ₹15,000, ಸಿಬ್ಬಂದಿ ಸಮವಸ್ತ್ರ ಮತ್ತು ಕ್ಲೀನಿಂಗ್ ಐಟಮ್ಗಳಿಗೆ ₹10,000 ಮತ್ತು ಇತರೆ ವೆಚ್ಚಗಳಿಗೆ ₹40,000. ಇಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಈ ಮೂಲಕ 50-100 ಆರ್ಡರ್ಗಳನ್ನು ನಿರ್ವಹಿಸಬಹುದು.
ಪ್ರತಿ ತಿಂಗಳ ವೆಚ್ಚ:
ಕಚ್ಚಾ ವಸ್ತುಗಳಿಗೆ ₹60,000, ಇಬ್ಬರು ಅಡುಗೆ ಮಾಸ್ಟರ್ಗಳು ಮತ್ತು ಒಬ್ಬ ಡೆಲಿವರಿ ಏಜೆಂಟ್ಗೆ ₹45,000, ಬಾಡಿಗೆ, ವಿದ್ಯುತ್, ಗ್ಯಾಸ್, ನೀರಿನ ಬಿಲ್ಗಳಿಗೆ ₹20,000, ಪ್ಯಾಕೇಜಿಂಗ್ಗೆ ₹10,000, ಮಾರ್ಕೆಟಿಂಗ್ ಮತ್ತು ಆನ್ಲೈನ್ ಜಾಹೀರಾತುಗಳಿಗೆ ₹5,000, ಇಂಧನ ಮತ್ತು ವಿತರಣಾ ವೆಚ್ಚಗಳಿಗೆ ₹8,000 ಮತ್ತು ಇತರ ಸಣ್ಣ ವೆಚ್ಚಗಳಿಗೆ ₹2,000. ತಿಂಗಳಿಗೆ ಒಟ್ಟು ವೆಚ್ಚ ಸುಮಾರು ₹1,50,000 ರೂ.ನಷ್ಟು ಬೇಕಾಗಬಹುದು. ಒಂದು ವೇಳೆ ಇದಕ್ಕಿಂತ ಕಡಿಮೆಯೂ ಆಗಬಹುದು, ಹೆಚ್ಚೂ ಆಗಬಹುದು. ಇದೊಂದು ಅಂದಾಜು ಲೆಕ್ಕವಾಗಿದೆ.
ಆದಾಯ ಮತ್ತು ಲಾಭದ ಅಂದಾಜು ಲೆಕ್ಕ:
ಪ್ರತಿದಿನ 100 ಟಿಫಿನ್ಗಳು ಅಥವಾ ಊಟ ₹80 ಕ್ಕೆ ಮಾರಾಟ ಮಾಡಿದ್ದೀರಿ ಎಂದಾದರೆ, ತಿಂಗಳಿಗೆ ₹2,40,000 ಆದಾಯ ಬರುತ್ತದೆ. ಖರ್ಚು-ವೆಚ್ಚಗಳನ್ನೆಲ್ಲಾ ಲೆಕ್ಕಹಾಕಿದ ನಂತರ, ತಿಂಗಳಿಗೆ ಸುಮಾರು ₹90,000 ಲಾಭ ಪಡೆಯಬಹುದು ಎನ್ನಲಾಗಿದೆ. ಈ ಮೂಲಕ 6-8 ತಿಂಗಳಲ್ಲಿ ಹಾಕಿದ ಬಂಡವಾಳವನ್ನು ಮರಳಿ ಪಡೆಯಬಹುದು.
Comments are closed.