Shabarimala: ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಹೊಸ ಮಾರ್ಗಸೂಚಿ ಬಿಡುಗಡೆ

Shabarimala: ಶಬರಿಮಲೆ ಅಯ್ಯಪ್ಪ ದೇಗುಲದ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಆರಂಭವಾಗಿದೆ. ಈ ಯಾತ್ರೆ 41 ದಿನಗಳ ಕಾಲ ನಡೆಯಲಿದೆ. ಯಾತ್ರೆಯ ಆರಂಭದ ನಡುವೆಯೇ, ಮೆದುಳು ತಿನ್ನುವ ಅಮೀಬಾ ಸೋಂಕಿನ ಆತಂಕ ಭಕ್ತರನ್ನು ಕಾಡುತ್ತಿದೆ.ಈ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಇಲಾಖೆ ಭಕ್ತರಿಗೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ನದಿಯಲ್ಲಿ ತೀರ್ಥಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರ ವಹಿಸಲು, ಕುಡಿಯಲು ಬಿಸಿ ನೀರನ್ನು ಬಳಸಲು, ಆಗಾಗ ಕೈಗಳನ್ನು ನೀರಿನಿಂದ ತೊಳೆದುಕೊಳ್ಳುವಂತೆ ಮತ್ತು ತೊಳೆದ ಹಣ್ಣುಗಳನ್ನು ಸೇವಿಸಲು ಸೂಚಿಸಲಾಗಿದೆ. ಅಲ್ಲದೆ, ಬೆಟ್ಟ ಹತ್ತುವಾಗ ಆಗಾಗ ವಿಶ್ರಾಂತಿ ಪಡೆಯುವಂತೆ ಮತ್ತು ಶೌಚಾಲಯಗಳನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ.
Comments are closed.