Bengalore: ರಾಜ್ಯದಲ್ಲಿ 10ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಶೋಧ ಕಾರ್ಯಕ್ಕೆ ಅನುಮತಿ

Share the Article

Bangalore: ಅತಿಹೆಚ್ಚು ಚಿನ್ನಸಿಗುವ ರಾಜ್ಯ ಎಂದು ಅನ್ನಿಸಿಕೊಂಡಿರುವ ಕರ್ನಾಟಕದಲ್ಲಿ ಇನ್ನೂ ಹೆಚ್ಚು ಚಿನ್ನ ಹಾಗೂ ಇತರೆ ಖನಿಜಗಳ ಪತ್ತೆಗಾಗಿ ಬೃಹತ್ ಪ್ರಮಾಣದ ಶೋಧ ನಡೆದಿದೆ. ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಂಬAಧಿತ ಸAಸ್ಥೆಗಳು 19 ಸ್ಥಳಗಳಲ್ಲಿ, ಸುಮಾರು 16,350 ಹೆಕ್ಟೇರ್‌ಗಳಲ್ಲಿ ಚಿನ್ನ ಸೇರಿದಂತೆ ಯುರೇನಿಯಂ, ತಾಮ್ರ ಇತರೆ ಖನಿಜಗಳ ನಿಕ್ಷೇಪಗಳನ್ನು ಗುರುತಿಸಲು ಮುಂದಾಗಿದ್ದು ಇದರಲ್ಲಿ, ಸುಮಾರು 14,೦೦೦ ಹೆಕ್ಟೇರ್ ಪ್ರದೇಶವು ಚಿನ್ನದ ನಿಕ್ಷೇಪಗಳಿಗಾಗಿ ಮೀಸಲಾಗಿದೆ.ಇದು ರಾಜ್ಯದಲ್ಲಿ ಈವರೆಗೆ ನಡೆಯುತ್ತಿರುವ ಅತಿ ದೊಡ್ಡ ಶೋಧ ಕಾರ್ಯಾಚರಣೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸುತ್ತಮುತ್ತಲಿನ 10 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರುವ ವರದಿಗಳಿವೆ. ಬೆಂಗಳೂರು ಮೂಲದ ಖಾಸಗಿ ಕಂಪನಿ ಶೋಧ ಕಾರ್ಯಕ್ಕೆ ಅನುಮತಿ ಪಡೆದಿದ್ದು, ಇಲ್ಲಿನ ಕೆಲವು ಪ್ರದೇಶಗಳಲ್ಲಿ ಪ್ರತಿಟನ್‌ಗೆ 19 ಗ್ರಾಂ ನಿಂದ 80 ಗ್ರಾಂ ವರೆಗೆ ಚಿನ್ನ ಇರಬಹುದು ಎಂದು ಹಳೆಯ ವರದಿಗಳು ಸೂಚಿಸಿವೆ. ಇಲ್ಲಿ ಅರಣ್ಯ ಪ್ರದೇಶ ಇರುವುದರಿಂದ ಶೋಧಕ್ಕೆ ಅರಣ್ಯ ಇಲಾಖೆಯ ಅನುಮತಿ ಅನಿವಾರ್ಯ. ಹಲವಾರು ಜಿಲ್ಲೆಗಳಲ್ಲಿ ಚಿನ್ನದ ಹುಡುಕಾಟ: ಹಾವೇರಿ, ಕೊಪ್ಪಳ, ಮಂಡ್ಯ, ಚಿತ್ರದುರ್ಗ, ಬಳ್ಳಾರಿ, ಹಾಸನ, ದಾವಣಗೆರೆ ಮತ್ತು ಕಲಬುರಗಿ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪಗಳ ಅನ್ವೇಷಣೆ ಪ್ರಗತಿಯಲ್ಲಿದೆ. ಕೆಲವು ಸ್ಥಳಗಳಲ್ಲಿ ಚಿನ್ನದ ಇರುವಿಕೆ ದೃಢಪಟ್ಟಿದೆ, ಆದರೆ ನಿಖರ ಪ್ರಮಾಣ ತಿಳಿಯಲು ಶೋಧ ಇನ್ನಷ್ಟು ಶೋಧ ನಡೆಸಬೇಕಾಗಿದೆ. ಹಾವೇರಿ (ನಾಗವಂದ, ಕಾಕೋಳ್), ಕೊಪ್ಪಳ (ಕಿಲಾರಹಟ್ಟಿ), ಚಿಕ್ಕಮಗಳೂರು (ಕಳಶಾಪುರ), ಮಂಡ್ಯ (ಯಡಿಯೂರು), ಬಳ್ಳಾರಿ (ಸಿರಿಗೆರೆ ್ರ) ಮತ್ತು ದಾವಣಗೆರೆ (ಕುದುರೆಕೊಂಡ-ಹಲ್ಲವನಗಳ್ಳಿ) ಪ್ರಮುಖ ಶೋಧ ಸ್ಥಳಗಳಾಗಿವೆ. ಮುಚ್ಚಿರುವ ಕೋಲಾರ ಚಿನ್ನದ ಗಣಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಅಲ್ಲಿನ 13 ಗುಡ್ಡಗಳನ್ನು ಹರಾಜು ಹಾಕಲು ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಈ ತ್ಯಾಜ್ಯ ಮಣ್ಣಿನ ಮರುಸಂಸ್ಕರಣೆಯಿಂದ ಚಿನ್ನವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ.ಚಿನ್ನದ ಜೊತೆಗೆ ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮರಳಗಲ್ಲ ಪ್ರದೇಶದಲ್ಲಿ 1,6೦೦ ಟನ್ ಲಿಥಿಯಂ (ಬಿಳಿ ಚಿನ್ನ ಎಂದು ಕರೆಯಲಾಗುವ) ನಿಕ್ಷೇಪ ಪತ್ತೆಯಾಗಿದೆ ಎಂದು ವರದಿಯಾಗಿದೆ. ಅನ್ವೇಷಣಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಮತ್ತು ನ್ಯಾಷನಲ್ ಮಿನರಲ್ ಎಕ್ಸ್ಪ್ಲೋರೇಶನ್ ಟ್ರಸ್ಟ್ ಹಣಕಾಸು ಒದಗಿಸುತ್ತಿವೆ. ಅನ್ವೇಷಣೆಯಲ್ಲಿ ಹಲವು ಹಂತಗಳಿವೆ. ಮೊದಲಿಗೆ ದೊಡ್ಡ ಪ್ರದೇಶದಲ್ಲಿ ಪ್ರಾಥಮಿಕ ರೇಕಾನೈಸನ್ಸ್ ಸರ್ವೇ ನಡೆಸಲಾಗುತ್ತದೆ ಮತ್ತು ಮಾದರಿ ಪರೀಕ್ಷೆ ಮಾಡಲಾಗುತ್ತದೆ. ನಂತರ ಕೆಲವು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರಾಥಮಿಕ ಅನ್ವೇಷಣೆ, ಒಂದು ಕಿಲೋಮೀಟರ್ ಅಥವಾ ಅದಕ್ಕಿಂತ ಕಡಿಮೆ ವ್ಯಾಪ್ತಿಯಲ್ಲಿ ಸಾಮಾನ್ಯ ಅನ್ವೇಷಣೆ ಹಾಗೂ ಕೊನೆಯ ಹಂತದಲ್ಲಿ ಅಯಸ್ಕ ಸಂಗ್ರಹಣೆಯ ಅಂದಾಜು ಮಾಡಲು ವಿವರವಾದ ಅನ್ವೇಷಣೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.ಪ್ರಸ್ತುತ ಅನ್ವೇಷಣೆ ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಕೆಲವು ಸ್ಥಳಗಳಲ್ಲಿ ಎರಡು ವರ್ಷಗಳು ಬೇಕಾಗಬಹುದು. ಬೇರೆ ಕಡೆ ಇನ್ನಷ್ಟು ಸಮಯ ಹಿಡಿಯಬಹುದು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಚಿನ್ನ, ತಾಮ್ರ ಮತ್ತು ಇತರೆ ಖನಿಜಗಳಿಗಾಗಿ ಮತ್ತೊಂದು 52 ಪ್ರದೇಶಗಳಲ್ಲಿ ರೇಕಾನೈಸನ್ಸ್ ಸರ್ವೇ ನಡೆಸಲು ಪಟ್ಟಿ ತಯಾರಿಸಲಾಗುತ್ತಿದೆ. ದಕ್ಷಿಣ ಕನ್ನಡ, ಬೆಳಗಾವಿ, ಬೆಂಗಳೂರು ಗ್ರಾಮಾಂತರದ ಹೆಸರಘಟ್ಟ, ವಿಜಯನಗರ, ಚಾಮರಾಜನಗರ, ಶಿವಮೊಗ್ಗದ ಹೊಳೆಹೊಣ್ಣೂರು, ಕಲಬುರಗಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿನ್ನದ ಸಂಗ್ರಹಣೆಯ ಸಾಧ್ಯತೆ ಇದೆ ಎಂದು ಮೂಲಗಳು ಸೂಚಿಸಿವೆ. ಇವುಗಳಲ್ಲಿ ಅನೇಕ ಸ್ಥಳಗಳು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತವೆ. ಪರೀಕ್ಷೆಗಾಗಿ ಮಾತ್ರ ಅನುಮತಿ ಬೇಕಿದ್ದು, ಗಣಿಗಾರಿಕೆಗಾಗಿ ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಒಂದು ವೇಳೆ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಚಿನ್ನ ಹಾಗೂ ಇತರೆ ಖನಿಜಗಳು ಪತ್ತೆಯಾಗಿ ಈ ಹೊಸ ಶೋಧ ಕಾರ್ಯ ಯಶಸ್ವಿಯಾದರೆ, ಕರ್ನಾಟಕವು ಮತ್ತೊಮ್ಮೆ ಚಿನ್ನದ ಉತ್ಪಾದನೆಯಲ್ಲಿ ಮುಂಚೂಣಿಗೆ ಬರಲು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

Comments are closed.