BBK-12 : ‘ಗಿಲ್ಲಿ ಬೇಡ್ವೇ ಬೇಡ, ಇವರು ಬಿಗ್ ಬಾಸ್ ವಿನ್ ಆಗಲಿ’ – ವೀಕ್ಷರಿಂದ ಈ ಸ್ಪರ್ಧಿಗೆ ಬಹುಪರಾಕ್

BBK-12 : ಬಿಗ್ ಬಾಸ್ ಸೀಸನ್ ಕನ್ನಡ 12- ಸುಮಾರು ಒಂದುವರೆ ತಿಂಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಜನರ ಮೆಚ್ಚುಗೆಯನ್ನು ಪಡೆದಿದೆ. ದಿನ ಕಳೆದಂತೆ ಹಲವು ಸ್ಪರ್ಧಿಗಳು ಜನರ ಮನಸ್ಸನ್ನು ಕದಿಯುತ್ತಿದ್ದಾರೆ. ಇದುವರೆಗೂ ಕನ್ನಡದ ಹೆಚ್ಚಿನ ಬಿಗ್ ಬಾಸ್ ಅಭಿಮಾನಿಗಳಿಗೆ ಗಿಲ್ಲಿ ನಟ ಬಾರಿ ಅಚ್ಚುಮೆಚ್ಚಿನ ಸ್ಪರ್ಧಿ ಆಗಿದ್ದರು. ಇವರೇ ಈಸರೆ ಬಿಗ್ ಬಾಸ್ ಕಪ್ ಗೆಲ್ಲೋದು ಎಂದು ಹೇಳಿ ಕಪ್ ಗೆಲ್ಲಬೇಕು ಎಂದು ಕೂಡ ಹಾರೈಸುತ್ತಿದ್ದರು. ಆದರೆ ಇದೀಗ ವೀಕ್ಷಕರು ಇಲ್ಲಿ ಬಿಗ್ ಬಾಸ್ ಗೆಲ್ಲೋದು ಬೇಡ, ಇವರು ಬಿಗ್ ಬಾಸ್ ವಿನ್ನ ಆಗಲಿ ಎಂದು ಹೇಳುತ್ತಿದ್ದಾರೆ.

ಹೌದು, ಕಾಮಿಡಿ ಅಷ್ಟೇ ಬಿಗ್ ಬಾಸ್ ಗೆಲ್ಲಲು ಮುಖ್ಯವಾಗಲ್ಲ, ಎಲ್ಲರನ್ನೂ ಎದುರಿಸಿ, ಎಲ್ಲರ ಜೊತೆ ಒಗ್ಗೂಡಿ ಆಟವಾಡುತ್ತ, ಬಿಗ್ ಬಾಸ್ ಕೊಟ್ಟ ಟಾಸ್ಕ್ ಅನ್ನು ಪೂರೈಸುತ್ತ ಸಾಗಬೇಕು.. ಈ ಎಲ್ಲಾ ವಿಚಾರಗಳನ್ನ ಮುಂದಿಟ್ಟುಕೊಂಡು ನೋಡಿದರೆ ಗಿಲ್ಲಿ ಇತ್ತೀಚಿಗೆ ಟಾಸ್ಕ್ ವಿಚಾರಗಳಲ್ಲಿ ಹಿಂದೆ ಸರಿಯುತ್ತಿದ್ದಾರೆ.. ಆದರೆ ರಘು ಅವರು ಯಾವುದೇ ರೀತಿ ಜಗಳ ಮಾಡಿಲ್ಲ, ವಿರೋಧಿಸುವವರ ಮಧ್ಯೆಯೂ ಉತ್ತಮವಾಗಿ ಅಟವಾಡುತ್ತಿದ್ದಾರೆ. ಅಲ್ಲದೆ, ಹಿಂದೆ ಮುಂದೆ ಮಾತನಾಡದೇ ಇದ್ದದ್ದು ಇದ್ದಂತೆ ಹೇಳುತ್ತಿದ್ದಾರೆ..
ಒಂದು ರೀತಿಯಲ್ಲಿ ನೋಡಿದ್ರೆ ರಘು ವಿಭಿನ್ನ ಸ್ಟಾಟರ್ಜಿ ಇಟ್ಟುಕೊಂಡು ತಮ್ಮದೇ ವಿಧಾನದಲ್ಲಿ ಆಟವಾಡುತ್ತಿದ್ದಾರೆ. ಟಾಸ್ಕ್‌ಗಳಲ್ಲಿಯೂ ಸಹ ಇವರನ್ನ ಬೀಟ್ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ಈಗಾಗಲೇ 2 ಬಾರಿ ಬಿಗ್ ಬಾಸ್ ಕ್ಯಾಪ್ಟನ್ಸಿ ಗೌರವ ಪಡೆದಿದ್ದಾರೆ. ಅಷ್ಟೇ ಅಲ್ಲ, ಕಳಪೆ ಪ್ರದರ್ಶನವನ್ನು ಎಲ್ಲಿಯೂ ತೋರಿಲ್ಲ. ಹಾಗಾಗಿ ರಘು ತಮ್ಮ ಪ್ರಬುದ್ಧತೆ, ತಿಳುವಳಿಕೆ, ಸಹನೆಯಿಂದ ಎಲ್ಲವನ್ನೂ ತುಂಬಾ ಎಚ್ಚರಿಕೆ ನಿಭಾಯಿಸುತ್ತಿದ್ದು ಅವರು ವಿನ್ ಆದ್ರೆ ಒಳ್ಳೆಯದು ಅಂತ ನೆಟ್ಟಿಗರ ಅಭಿಪ್ರಾಯ.
Comments are closed.