Savings Account : ಇದೊಂದು ಸಣ್ಣ ಕೆಲಸ ಮಾಡಿ, ಸೇವಿಂಗ್ಸ್ ಅಕೌಂಟಿನಲ್ಲಿಯೂ FD ಅಷ್ಟೇ ಬಡ್ಡಿ ಗಳಿಸಿ!!

Savings Account : ಭಾರತದ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂದು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಎಲ್ಲರ ಬೆಳೆಯುವ ಸೇವಿಂಗ್ಸ್ ಖಾತೆ ಇದ್ದೇ ಇದೆ. ನೀವೇನಾದರೂ ಇದೊಂದು ಸಣ್ಣ ಕೆಲಸ ಮಾಡಿದರೆ ಸೇವಿಂಗ್ಸ್ ಅಕೌಂಟಿನಲ್ಲಿಯೂ ಕೂಡ FD ಅಷ್ಟೇ ಬಡ್ಡಿಯನ್ನು ಗಳಿಸಬಹುದು.

ಹೌದು, ಸೇವಿಂಗ್ ಅಕೌಂಟ್ ತೆರೆಯುವ ವೇಳೆ ಬ್ಯಾಂಕ್ ನಿಮಗೆ ಆಟೋ-ಸ್ವೀಪ್ ಫೀಚರ್ ನೀಡುತ್ತದೆ. ಇದನ್ನು ನೀವು ಸಕ್ರಿಯಗೊಳಿಸಬೇಕು. ಉಳಿತಾಯ ಖಾತೆಯಲ್ಲಿ ಆಟೋ ಸ್ವೀಪ್ ಸಕ್ರಿಯವಾಗಿದ್ದರೆ ನೀವು ಎಫ್ ಡಿ ಬಡ್ಡಿಯನ್ನು ಗಳಿಸಬಹುದು. ಆಟೋ ಸ್ವೀಪ್ ವಿಶೇಷವೆಂದ್ರೆ ಇದು ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹಣವನ್ನು ಲಿಂಕ್ಡ್ ಫಿಕ್ಸೆಡ್ ಡೆಪಾಸಿಟ್ (FD) ಗೆ ಸ್ವಯಂಚಾಲಿತವಾಗಿ ವರ್ಗಾಯಿಸುತ್ತದೆ. ಅಲ್ಲಿ ನೀವು ಹೆಚ್ಚಿನ ಆದಾಯವನ್ನು ಗಳಿಸುತ್ತೀರಿ.
ಬ್ಯಾಂಕುಗಳು ಸಾಮಾನ್ಯವಾಗಿ ಉಳಿತಾಯ ಖಾತೆಗಳಿಗೆ ಹೋಲಿಸಿದರೆ FD ಗಳ ಮೇಲೆ ಹೆಚ್ಚು ಬಡ್ಡಿ ನೀಡುತ್ತವೆ. ಉಳಿತಾಯ ಖಾತೆಗಿಂತ ಎಫ್ ಡಿಗೆ ಸುಮಾರು ಮೂರು ಪಟ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಆಟೋ ಸ್ವೀಪ್ ಸ್ವಯಂಚಾಲಿತವಾಗಿ ನಿಮ್ಮ ಉಳಿತಾಯಕ್ಕೆ ಉತ್ತಮ ಆದಾಯವನ್ನು ನೀಡುತ್ತದೆ..
ಆಟೋ ಸ್ವೀಪ್ ಗೆ ಸ್ವಿಚ್ ಆಗೋದು ಹೇಗೆ? :
ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಈಗಾಗಲೇ ನಿಮ್ಮ ಬಳಿ ಉಳಿತಾಯ ಖಾತೆ ಇದ್ರೂ ನೀವೀಗ ಆಟೋ ಸ್ವೀಪ್ ಆಯ್ಕೆ ಪಡೆಯಬಹುದು. ನೀವು ನಿಮ್ಮ ಬ್ಯಾಂಕ್ ಖಾತೆಗೆ ಹೋಗುವ ಮೂಲಕ ಆಟೋ ಸ್ವೀಪ್ ಸಕ್ರಿಯಗೊಳಿಸಬಹುದು. ನೀವು ಆಟೋ ಸ್ವೀಪ್ ಮಾಡುವ ವೇಳೆ ಮೊತ್ತವನ್ನು ನಿಗದಿ ಮಾಡ್ಬೇಕು. ಆಟೋ ಸ್ವೀಪ್ ಆಯ್ಕೆಯನ್ನು ನೀವು ಆನ್ಲೈನ್ ಮೂಲಕವೂ ಸಕ್ರಿಯಗೊಳಿಸಬಹುದು.
Comments are closed.