Ravindra Jadeja: 12 ವರ್ಷದ CSK ಪಯಣಕ್ಕೆ ರವೀಂದ್ರ ಜಡೇಜಾ ವಿದಾಯ – ಹೊಸ ತಂಡ ಸೇರ್ಪಡೆ

Raveendra Jadeja: ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೀರ್ಘಕಾಲದ ಆಲ್‌ರೌಂಡರ್ ಮತ್ತು ಚಾಂಪಿಯನ್ ಆಟಗಾರ ರವೀಂದ್ರ ಜಡೇಜಾ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 12 ವರ್ಷಗಳ ತಮ್ಮ ಸಿಎಸ್‌ಕೆ ಪಯಣಕ್ಕೆ ವಿದಾಯ ಹೇಳಿ ಹೊಸ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚಾಂಪಿಯನ್ ಆಟಗಾರ ರವೀಂದ್ರ ಜಡೇಜಾ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಆವೃತ್ತಿಯಲ್ಲಿ ಹೊಸ ತಂಡದ ಪರ ಆಡುವುದನ್ನು ಕಾಣಬಹುದು. ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ರವೀಂದ್ರ ಜಡೇಜಾರನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಟ್ರೇಡಿಂಗ್ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ ಎನ್ನಲಾಗುತ್ತಿದೆ.
ಸಿಎಸ್‌ಕೆ ಫ್ರಾಂಚೈಸಿಯ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲೂ ಜಡೇಜಾ ಇದ್ದು, ತಂಡದ ಮೇಲಿನ ಅವರ ಪ್ರಭಾವ ಅಪಾರ. 2012 ರಲ್ಲಿ ಸಿಎಸ್‌ಕೆ ಸೇರಿದ್ದಾಗ ಅವರನ್ನು ₹9.2 ಕೋಟಿಗೆ ಖರೀದಿಸಲಾಗಿತ್ತು. 2014 ರಲ್ಲಿ ಅವರ ಸಂಬಳವನ್ನು ₹5.5 ಕೋಟಿಗೆ ಇಳಿಸಲಾಯಿತು. ಬಳಿಕ 2018 ರಲ್ಲಿ ₹7 ಕೋಟಿ ಮತ್ತು 2022 ರ ಮೆಗಾ ಹರಾಜಿನಲ್ಲಿ ₹16 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. 2025 ರಲ್ಲಿಯೂ ಜಡೇಜಾ ಅವರಿಗೆ ₹18 ಕೋಟಿ ನೀಡಿ ಉಳಿಸಿಕೊಳ್ಳಲಾಗಿತ್ತು.
ಒಟ್ಟಾರೆಯಾಗಿ, ಜಡೇಜಾ ಫ್ರಾಂಚೈಸಿಯೊಂದಿಗೆ 12 ಆವೃತ್ತಿಗಳನ್ನು ಕಳೆದಿದ್ದು, ಈ 12 ವರ್ಷಗಳ ಪ್ರಯಾಣದಲ್ಲಿ ಜಡೇಜಾ ಅವರ ಖಜಾನೆಗೆ ಕೋಟಿ ಕೋಟಿ ರೂ. ಬಂದು ಬಿದ್ದಿದೆ. ಒಟ್ಟಾರೆಯಾಗಿ ಸಿಎಸ್‌ಕೆ ಜೊತೆಗಿನ ಪ್ರಯಾಣದಲ್ಲಿ ಜಡೇಜಾ ಒಟ್ಟು 123.4 ಕೋಟಿ ರೂಗಳನ್ನು ಸಂಪಾಧನೆ ಮಾಡಿದ್ದಾರೆ.
Comments are closed.