PM Kissan: ಈ ಬಾರಿ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಸಿಗುತ್ತೆ 4,000!!

Share the Article

PM Kisan : ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆ(PM Kissan Scheme)ಅಡಿ ಪ್ರತಿವರ್ಷವೂ ರೈತರಿಗೆ 6,000 ಹಣವನ್ನು ನೀಡುತ್ತಿದೆ. ಈಗಾಗಲೇ 20 ಕಂತಿನ ಹಣವು ರೈತರ ಖಾತೆಗೆ ಜಮಾ ಆಗಿದ್ದು, ಈಗ 21ನೇ ಕಂತಿನ ಹಣಕ್ಕೆ ಎಲ್ಲರೂ ಕಾದು ಕೂತಿದ್ದಾರೆ. ಆದರೆ ಈ ಬಾರಿ ಕೆಲವರು ರೈತರಿಗೆ 2,000 ರೂಪಾಯಿ ಮಾತ್ರವಲ್ಲ, 4000 ರೂಪಾಯಿ ದೊರೆಯಲಿದೆ.

ಹೌದು, ಅನರ್ಹರ ಅರ್ಜಿ ಸಲ್ಲಿಕೆ, ಅಪೂರ್ಣ ಕೆವೈಸಿ ನಂತಹ ತಾಂತ್ರಿಕ ಕಾರಣಗಳಿಂದಾಗಿ 21ನೇ ಕಂತಿನ ಹಣ ಬರುವುದಿಲ್ಲ ಎನ್ನಲಾಗಿದೆ. ಇನ್ನೂ ಕೆಲವು ರೈತರು 20ನೇ ಕಂತಿನ ಹಣವನ್ನು ಸ್ವೀಕರಿಸಿಲ್ಲ. ಏಕೆಂದರೆ ಅಪೂರ್ಣ ಕೆವೈಸಿ. ಇದೀಗ ಕೆವೈಸಿ ಸಂಪೂರ್ಣ ಮಾಡಿದ ರೈತರು ಮುಂದಿನ 21 ನೇ ಕಂತಿನೊಂದಿಗೆ ಬಾಕಿ ಉಳಿದಿರುವ 2,000 ರೂಪಾಯಿಗಳನ್ನು ಪಡೆಯಲಿದ್ದಾರೆ. ಅಂದರೆ, ಅನೇಕರಿಗೆ 20ನೇ ಮತ್ತು 21ನೇ ಕಂತುಗಳು ಸೇರಿ 4,000 ರೂಪಾಯಿಗಳು ಅವರ ಖಾತೆಗೆ ಜಮೆಯಾಗಬಹುದು ಎನ್ನಲಾಗಿದೆ

Comments are closed.