Cricket : ಕ್ರಿಕೆಟ್ ಆಟಗಾರರು ಆಟದ ಮಧ್ಯೆ ಬಾಳೆಹಣ್ಣು ತಿನ್ನುವುದೇಕೆ? ಯಾವ ಕ್ರಿಕೆಟ್ ಅಭಿಮಾನಿಗೂ ಇದು ಗೊತ್ತಿಲ್ಲ

Cricket : ಕ್ರಿಕೆಟ್ ಪಂದ್ಯದ ವೇಳೆ ಮೈದಾನದಲ್ಲಿ ಆಗಾಗ ಆಟಗಾರರು ಬಾಳೆಹಣ್ಣನ್ನು ತರಿಸಿಕೊಂಡು ತಿನ್ನುತ್ತಾರೆ. ಆದರೆ ಈ ಕುರಿತು ಹೆಚ್ಚಿನವರು ಒಬ್ಸರ್ವ್ ಮಾಡಿರುವುದೇ ಇಲ್ಲ. ಹಾಗಾದರೆ ಆಟಗಾರರು ಆಟದ ಮಧ್ಯೆ ಬಾಳೆಹಣ್ಣನ್ನು ತಿನ್ನುವುದಕ್ಕೆ? ಇದರಿಂದ ಆಗುವ ಪ್ರಯೋಜನಗಳೇನು?

ಕ್ರೀಡೆಗಳು ಹೆಚ್ಚಿನ ದೈಹಿಕ ಶಕ್ತಿಯನ್ನು ತೆಗೆದುಕೊಳ್ಳುತ್ತವೆ. ನಿಲ್ಲದೆ ಓಡುವುದು ಮತ್ತು ಆಟವಾಡುವುದನ್ನು ಮುಂದುವರಿಸುವುದರಿಂದ ದೇಹದ ಶಕ್ತಿ ಬೇಗನೆ ಕ್ಷೀಣಿಸುತ್ತದೆ. ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್ಗಳು ಬೇಗನೆ ಜೀರ್ಣವಾಗುತ್ತವೆ ಮತ್ತು ತ್ವರಿತ ಶಕ್ತಿಯನ್ನು ನೀಡುತ್ತವೆ.
ಕ್ರಿಕೆಟ್ ಆಟದ ವೇಳೆ ಸಾಕಷ್ಟು ಧಣಿವಾಗಿರುತ್ತದೆ. ಮೈ ಬೆವರುತ್ತದೆ. ಸೋಡಿಯಂ ಮತ್ತು ಪೊಟ್ಯಾಸಿಯಮ್ನಂತಹ ಪ್ರಮುಖ ಎಲೆಕ್ಟ್ರೋಲೈಟ್ಗಳು ಬೆವರಿನ ಮೂಲಕ ಕಳೆದುಹೋಗುತ್ತವೆ. ಇದು ಸ್ನಾಯು ಸಮಸ್ಯೆಗಳಿಗೆ ಕಾರಣವಾಗಬಹುದು. ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ದೇಹಕ್ಕೆ ಅಗತ್ಯವಿರುವ ಎಲೆಕ್ಟ್ರೋಲೈಟ್ಗಳನ್ನು ಮರುಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ವೈಫಲ್ಯದ ಭಯ ಮತ್ತು ದೈಹಿಕ ಪರಿಶ್ರಮವು ಒತ್ತಡವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಾಳೆಹಣ್ಣಿನಲ್ಲಿ ಕಂಡುಬರುವ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಆಟಗಳ ಸಮಯದಲ್ಲಿ ಹೆಚ್ಚಿನ ಶಕ್ತಿಯನ್ನು ವ್ಯಯಿಸಲಾಗುತ್ತದೆ, ಆದ್ದರಿಂದ ಜೀರ್ಣಕ್ರಿಯೆಯು ಬಲವಾಗಿರಬೇಕು. ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ ಮತ್ತು ದೇಹವು ಹಗುರವಾಗಿರುತ್ತದೆ.
Comments are closed.