Anaya Bnagar: ಲಿಂಗ ಪರಿವರ್ತನೆ ಮಾಡಿಕೊಂಡ ಅನಯಾ ಬಂಗಾರ್ RCB ತಂಡದಿಂದ ಕಣಕ್ಕೆ?

Share the Article

Anaya Bangar: ಲಿಂಗ ಪರಿವರ್ತನೆ ಮಾಡಿಕೊಂಡು ಸಾಕಷ್ಟು ಸುದ್ದಿಯಾಗಿದ್ದ ಅನಯಾ ಬಂಗಾರ್ ಅವರು ಆರ್‌ಸಿಬಿ ತಂಡದಿಂದ ಕಣಕ್ಕೆ ಇಳಿಯುತ್ತಾರಾ ಎಂದು ಪ್ರಶ್ನೆಗಳು ಉದ್ಭವಿಸಿವೆm ಇದಕ್ಕೆ ಕಾರಣ ಅವರು ಪೋಸ್ಟ್ ಮಾಡಿಕೊಂಡಿರುವ ವಿಡಿಯೋ.

ಹೌದು, ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯ ಬಂಗಾರ್ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರ್‌ಸಿಬಿ ಕ್ರಿಕೆಟ್‌ ಕಿಟ್‌ನ ಬ್ಯಾಗ್‌ ಜೊತೆ ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದು ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ((WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅವರು ಕಣಕ್ಕಿಳಿಯಲಿದ್ದಾರಾ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.

ಅನಯಾ ತನ್ನ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ‘ಈ ಬಾರಿ ಆರ್ಯನ್ ಆಗಿ ಅಲ್ಲ, ಅನಯಾ ಆಗಿ’ ಮತ್ತೆ ಮೈದಾನಕ್ಕೆ ಇಳಿಯಲಿದ್ದೇನೆ ಎಂದು ಕಳೆದ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು. ರೈಸ್ ಅಂಡ್ ಫಾಲ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ತಾವು ಬಹಳ ಸಮಯದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಬಗ್ಗೆ ಉತ್ಸಾಹ ಹೊಂದಿರುವುದಾಗಿ ಹೇಳಿಕೊಂಡಿದ್ದರು. ‘ನಾನು ನನ್ನ ಹಕ್ಕುಗಳಿಗಾಗಿ ಹೋರಾಡುತ್ತೇನೆ ಮತ್ತು ಒಂದು ದಿನ ನಾನು ಭಾರತಕ್ಕಾಗಿ ವಿಶ್ವಕಪ್ ಗೆಲ್ಲುತ್ತೇನೆ’ ಎಂದು ಹೇಳಿದ್ದರು.

ಇನ್ನೂ ಐಸಿಸಿ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಿಂದ ಲಿಂಗತ್ವ ಅಲ್ಪಸಂಖ್ಯಾತ ಆಟಗಾರರು ಆಡುವುದನ್ನು ನಿಷೇಧಿಸಿದೆ. ಇನ್ನೂ ಸಂದರ್ಶನದಲ್ಲಿ ತಮ್ಮ ತಂದೆ, ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್, ‘ಭವಿಷ್ಯದ ಕ್ರಿಕೆಟ್‌ನಲ್ಲಿ ತನಗೆ ಯಾವುದೇ ಸ್ಥಾನ ಸಿಗುವುದಿಲ್ಲ’ ಎಂದು ಹೇಳಿರುವುದಾಗಿ ತಿಳಿಸಿದ್ದರು. ಮಾತ್ರವಲ್ಲ, ತಾನು ಕೂಡ ತಂದೆಯ ಮಾತನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದರು.

Comments are closed.