Alcohol price: ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಮದ್ಯ ಮಾರಾಟ ಮಾಡೋ ರಾಜ್ಯ ಯಾವುದು? ಇಲ್ಲಿ ನೀರಿಗಿಂತ ಕಮ್ಮಿ ಬೀರಿನ ರೇಟ್

Alcohol price: ನಮ್ಮ ದೇಶದಲ್ಲಿ ಮದ್ಯದ ಬೆಲೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಡಿಫ್ರೆಂಟ್ ಆಗಿರುತ್ತದೆ. ಕೆಲವು ರಾಜ್ಯಗಳಲ್ಲಿ ಕಮ್ಮಿ ಇದ್ದರೆ ಇನ್ನು ಕೆಲವು ರಾಜ್ಯಗಳಲ್ಲಿ ಹೆಚ್ಚುರುತ್ತದೆ. ಆದರೆ ನಿಮಗೆ ಭಾರತದಲ್ಲಿ ಅತಿ ಕಡಿಮೆ ಮದ್ಯ ದೊರೆಯುವ ರಾಜ್ಯ ಯಾವುದು ಗೊತ್ತಾ? ಇಲ್ಲಿ ಬೀರಿಗಿಂತ ನೀರಿನ ಬೆಲೆಯೇ ಹೆಚ್ಚು.

ಹೌದು, ಮದ್ಯದ ಮೇಲೆ ಜಿಎಸ್ಟಿ ಅನ್ವಯಿಸುವುದಿಲ್ಲದ ಕಾರಣ, ಪ್ರತಿ ರಾಜ್ಯ ತನ್ನ ನೀತಿಗೆ ಅನುಗುಣವಾಗಿ ಮದ್ಯದ ಬೆಲೆಯನ್ನು ನಿಗದಿಪಡಿಸುತ್ತದೆ. ಹಾಗಾಗಿ ದೇಶದಾದ್ಯಂತ ಅತೀ ಅಗ್ಗದ ಮದ್ಯ ಸಿಗುವ ರಾಜ್ಯ ಗೋವಾ ಆಗಿದೆ. ಇಲ್ಲಿ ಬಿಯರ್, ವೋಡ್ಕಾ, ವಿಸ್ಕಿ, ರಮ್ ಸೇರಿದಂತೆ ಎಲ್ಲಾ ರೀತಿಯ ಮದ್ಯಗಳು ಇತರ ರಾಜ್ಯಗಳಿಗಿಂತ ತುಂಬಾ ಅಗ್ಗದ ಬೆಲೆಯಲ್ಲಿ ದೊರೆಯುತ್ತವೆ.
ಇನ್ನೂ ಗೋವಾದ ನಂತರ ಹರಿಯಾಣದಲ್ಲೂ ಮದ್ಯ ಅಗ್ಗದ ಬೆಲೆಯಲ್ಲಿ ಸಿಗುತ್ತದೆ. ಇಲ್ಲಿ ಅಬಕಾರಿ ಸುಂಕ ಕೇವಲ 47 ಶೇಕಡಾ ಮಾತ್ರವಾಗಿದ್ದು, ಕ್ಯಾಂಟೀನ್‌ಗಳು ಮತ್ತು ಇಲಾಖಾ ಮಳಿಗೆಗಳ ಕಾರಣದಿಂದಾಗಿ ಮದ್ಯ ಅಗ್ಗದ ದರದಲ್ಲಿ ಲಭ್ಯವಿದೆ. ವಿಶೇಷವಾಗಿ ಗುರುಗ್ರಾಮ್ ಮತ್ತು ಫರಿದಾಬಾದ್ ಪ್ರದೇಶಗಳಲ್ಲಿ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಮದ್ಯದ ಬೆಲೆ ಕಡಿಮೆ.
Comments are closed.