Adhra-Pan link: ಆಧಾರ್-ಪ್ಯಾನ್ ಲಿಂಕ್ ಗೆ ಲಾಸ್ಟ್ ಡೇಟ್ ಫಿಕ್ಸ್ ಮಾಡಿದ ಗೌರ್ನಮೆಂಟ್ – ಮಾಡದಿದ್ರೆ ಈ ಎಲ್ಲ ಸೌಲಭ್ಯ ಕಟ್

Adhar-Pan link: ಭಾರತದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಎಲ್ಲರಿಗೂ ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್ ಲಿಂಕ್ ಮಾಡುವುದನ್ನು ಭಾರತ ಸರ್ಕಾರವು ಈಗ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಸಮಯವನ್ನೂ ನಿಗದಿ ಮಾಡಿದ್ದು ಆ ಗಡುವು ಕೂಡ ಮುಗಿದಿದೆ. ಇಷ್ಟಾಗಿಯೂ ಕೆಲವರು ಇನ್ನೂ ಲಿಂಕ್ ಮಾಡಿಲ್ಲ. ಹೀಗಾಗಿ ಅವರೆಲ್ಲರ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆ. ಇದೀಗ ಈ ಕುರಿತಂತೆ ಮತ್ತೊಂದು ಹೊಸ ಅಪ್ಡೇಟ್ ಬಂದಿದೆ.

ಹೌದು, ನೀವಿನ್ನು ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್(Adhar-Pan link) ಮಾಡಿಕೊಳ್ಳದೆ ಇದ್ರೆ, ತಕ್ಷಣ ಮಾಡಿಕೊಳ್ಳಿ. ಡಿಸೆಂಬರ್ 31 ಅಂದರೆ 2025ರ ಡಿಸೆಂಬರ್ 31 ಕೊನೆಯ ದಿನ ನಿಗದಿ ಮಾಡಲಾಗಿದೆ. ಒಂದು ವೇಳೆ ಹೀಗೆ ಮಾಡದೇ ಹೋದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಇದರಿಂದ ಹಲವು ಅನಾನುಕೂಲಗಳಿವೆ. ಅದರಲ್ಲಿಯೂ ಸಂಬಳ ಪಡೆಯುತ್ತಿರುವವರು ಈ ಲಿಂಕ್ ಮಾಡದೇ ಹೋದರೆ, ಐಟಿಆರ್ ಫೈಲಿಂಗ್, ಮರುಪಾವತಿ ಮತ್ತು ಹಣಕಾಸಿನ ವಹಿವಾಟುಗಳಿಗೆ ಅಡ್ಡಿಯಾಗುತ್ತದೆ.
ಆಧಾರ್ -ಪಾನ್ ಲಿಂಕ್ ಮಾಡುವುದು ಹೇಗೆ?
ಆದಾಯ ತೆರಿಗೆಯ(Income tax)ವೆಬ್ ಸೈಟ್ ಗೆ ಹೋಗಿ ಸಾವಿರ ರೂಪಾಯಿಗಳ ದಂಡ ಪಾವತಿಸಿ ಲಿಂಕ್ ಮಾಡಿಕೊಳ್ಳಬಹುದು. ಹಾಗೂ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಅನ್ನು ಮತ್ತೆ ಆಕ್ಟಿವ್ ಗೊಳಿಸಬಹುದು. ಸರಿಯಾದ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ದಂಡ ಪಾವತಿಸಿ ನಿಮ್ಮ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಆಕ್ಟಿವ್ ಮಾಡಿಕೊಳ್ಳಿ.
ನಿಮ್ಮ ಪ್ಯಾನ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?
ನೀವು ನಿಗದಿತ ದಿನಾಂಕದೊಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡದಿದ್ದರೆ:
ಟಿಡಿಎಸ್/ಟಿಸಿಎಸ್ ಅನ್ನು ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುತ್ತದೆ.
ನಿಮ್ಮ ಪ್ಯಾನ್ ಕಾರ್ಡ್ ಮರುದಿನದಿಂದ ನಿಷ್ಕ್ರಿಯಗೊಳ್ಳುತ್ತದೆ.
ನಿಮ್ಮ ಐಟಿಆರ್ ಅನ್ನು ಸಲ್ಲಿಸಲು ಅಥವಾ ಪರಿಶೀಲಿಸಲು ನಿಮಗೆ ಸಾಧ್ಯವಾಗುವುದಿಲ್ಲ.
ಐಟಿಆರ್ ಮರುಪಾವತಿಗಳನ್ನು ನಿಲ್ಲಿಸಲಾಗುತ್ತದೆ.
ಬಾಕಿ ಇರುವ ಐಟಿಆರ್ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ.
ಟಿಡಿಎಸ್/ಟಿಸಿಎಸ್ ಕ್ರೆಡಿಟ್ಗಳನ್ನು ಫಾರ್ಮ್ 26ಎಎಸ್ನಲ್ಲಿ ಪ್ರತಿಬಿಂಬಿಸಲಾಗುವುದಿಲ್ಲ.
Comments are closed.