Mangalore: ಮಂಗಳೂರು: ಮಾದಕ ವಸ್ತು ಸೇವನೆ: 8 ಮಂದಿ ವಶ

Share the Article

Mangalore: ಮಂಗಳೂರು(Mangalore) ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿದ ಆರೋಪದಲ್ಲಿ 8 ಮಂದಿಯನ್ನು ಬಂಧಿಸಿದ್ದಾರೆ.

ಅಬ್ದುಲ್ ಸತ್ತಾರ್ (35), ಮುಹಮ್ಮದ್ ರಫೀಕ್ (42), ರಜತ್, (29) ಎಂಬವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೋಡಿಕಲ್ ಶಾಲೆಯ ಬಳಿ ಪ್ರಜ್ವಲ್ ಸಿ.ಯಾನೆ ಪಜ್ಜು (26) ಎಂಬಾತನನ್ನು ಉರ್ವಾ ಪೊಲೀಸರು ಮತ್ತು ಕಾರ್ನಾಡ್ ಗ್ರಾಮದ ಲಿಂಗಪ್ಪಯ್ಯ ಕಾಡು ಬಳಿ ಮಾದಕ ವಸ್ತು ಸೇವಿಸಿದ ಆರೋಪದಲ್ಲಿ ಧರ್ಮಲಿಂಗ ಎಂಬಾತನನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.

ಸಿರಾಜ್ (46) ಎಂಬಾತನನ್ನು ಕೊಣಾಜೆ ಪೊಲೀಸರು, ಮರವೂರು ಪೇಟೆಯಲ್ಲಿ ಮಾದಕ ವಸ್ತು ಸೇವಿಸಿದ ಆರೋಪದಲ್ಲಿ ಸಾಹೂದ್ (27) ಎಂಬಾತನನ್ನು ಬಜ್ಪೆ ಠಾಣಾ ಪೊಲೀಸರು, ಲಾಲ್ ಬಾಗ್ ಬಳಿ ಮಾದಕ ವಸ್ತು ಸೇವನೆ ಮಾಡಿದ ಸೋಮವಾರಪೇಟೆಯ ವಿಷ್ಣು ಜಿ.ಕೆ (22) ಎಂಬಾತನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Comments are closed.