Bigg Boss : ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ – ಪರಸ್ಪರ ಹೊಡೆದಾಡಿಕೊಂಡ ಸ್ಪರ್ಧಿಗಳು!!

Bigg Boss : ಯಾರ ಮೇಲೆ ಯಾರೂ ಹಲ್ಲೆ ಮಾಡಬಾರದು’ ಎಂಬುದು ಬಿಗ್ ಬಾಸ್ನ (Bigg Boss) ಮೂಲ ನಿಯಮಗಳಲ್ಲಿ ಒಂದು. ಈ ರೀತಿ ಮಾಡಿದರೆ ಆ ಕ್ಷಣವೇ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗುತ್ತದೆ. ಆದರೆ ಇದೆಲ್ಲವನ್ನು ಮರೆತು ಇದೀಗ ಬಿಗ್ ಬಾಸ್ ಸ್ಪರ್ದಿಗಳು ಮನೆಯಲ್ಲಿ ಪರಸ್ಪರ ಹೊಡೆದುಕೊಂಡು ರಂಪ ಮಾಡಿಕೊಂಡಿದ್ದಾರೆ. ಹಾಗಂತ ಇದು ಕನ್ನಡ ಬಿಗ್ ಬಾಸ್ ಮನೆಯಲ್ಲಿ ನಡೆದ ವಿಚಾರವಲ್ಲ. ಬದಲಿಗೆ ತಮಿಳು ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆ.

ಹೌದು, ವಿಜಯ್ ಸೇತುಪತಿ ನಡೆಸಿಕೊಡುವ ತಮಿಳು ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ ನಡೆದಿದೆ. ಬಿಗ್ ಬಾಸ್ ತಮಿಳು ಸೀಸನ್ 9 ಇಂದಿಗೆ 30 ದಿನಗಳನ್ನು ಪೂರೈಸಿದೆ. ಈ ಕಾರ್ಯಕ್ರಮವು 20 ಸ್ಪರ್ಧಿಗಳೊಂದಿಗೆ ಪ್ರಾರಂಭವಾಯಿತು. ಆದರೆ, 9ನೇ ಸೀಸನ್ ಅಭಿಮಾನಿಗಳಿಂದ ಹೆಚ್ಚು ನಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ ಎಂಬುದು ಗಮನಾರ್ಹ.
ಇದೀಗ ಬಿಗ್ ಬಾಸ್ ತಮಿಳು ಸೀಸನ್ 9 ರ ಮೊದಲ ಪ್ರೋಮೋ ವಿಡಿಯೋ ಇಂದು ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ, ಕಮ್ರುದ್ದೀನ್ ಮತ್ತು ಪ್ರವೀಣ್ ನಡುವೆ ಜಗಳ ನಡೆಯುತ್ತಿದೆ. ಪ್ರಜಿನ್ ಅವರನ್ನು ತಡೆಯಲು ಮಧ್ಯೆ ಹೋಗುತ್ತಾನೆ. ಇದರ ನಂತರ, ಕಮ್ರುದ್ದೀನ್ ಮತ್ತು ಪ್ರಜಿನ್ ನಡುವೆ ಜಗಳವಾಗುತ್ತದೆ. ಸಾಂಡ್ರಾ ಭಯದಿಂದ ಅಳುತ್ತಾಳೆ. ಈ ವಿಡಿಯೋ ಪ್ರಸ್ತುತ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.
Comments are closed.