Uppinangady: ಉಪ್ಪಿನಂಗಡಿ: ಒಂದೇ ಮನೆಯ 3 ಮಕ್ಕಳಿಗೆ ಹಾವು ಕಡಿತ!

Share the Article

Uppinangady: ಬೆಳ್ತಂಗಡಿ ತಾಲ್ಲೂಕು ತಣ್ಣೀರುಪಂತ ಗ್ರಾಮದ ಕುದ್ರಡ್ಕ ಎಂಬಲ್ಲಿ ಒಂದೇ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳಿಗೆ ವಿಷ ಪೂರಿತ ಹಾವು ಕಡಿದಿದ್ದು, ತಕ್ಷಣ ಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುದ್ರಡ್ಕ ನಿವಾಸಿ ವಿಜಯ ಮಡೆಕ್ಕಿಲ ಎಂಬುವರ ಮನೆಯಲ್ಲಿ ತಡರಾತ್ರಿ ಘಟನೆ ನಡಿದಿದ್ದು, ವಿಜಯ ಅವರ ಪುತ್ರ ದಕ್ಷಿತ್, ಅವರ ಅಕ್ಕನ ಮಕ್ಕಳಾದ ವಿಶ್ಮಿತಾ, ಮತ್ತು ಅನ್ವಿತಾ ಒಂದೇ ಕೋಣೆಯಲ್ಲಿ ಮಲಗಿದ್ದರು. ರಾತ್ರಿ 12ರ ಸುಮಾರಿಗೆ ಕೋಣೆಯೊಳಗೆ ಪ್ರವೇಶಿಸಿದ್ದ ವಿಷಪೂರಿತ ಕನ್ನಡಿ ಹಾವು ಮಕ್ಕಳ ಕೈಗೆ ಹಾವು ಕಚ್ಚಿದೆ. ಆದರೆ ಉಪ್ಪಿನಂಗಡಿಯನ್ನು ಸಂಪರ್ಕಿಸುವ ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯ ದುಃಸ್ಥಿತಿಯಿಂದ ಆಸ್ಪತ್ರೆ ತಲುಪುವುದು ವಿಳಂಬವಾಗುವ ಸೂಚನೆ ಅರಿತ ಮನೆಯವರು ತಣ್ಣೀರುಪಂತ ಗ್ರಾಮದಲ್ಲಿನ ನಾಟಿ ವೈದ್ಯ ಸೂರಪ್ಪ ಪೂಜಾರಿ ಅವರಿಂದ ಚಿಕಿತ್ಸೆ ಪಡೆದುಕೊಂಡು ಮಕ್ಕಳ ಜೀವ ಉಳಿಸಿದ್ದಾರೆ.

Comments are closed.