Protest: ಸಿ ಮತ್ತು ಡಿ ಜಾಗ ಡೀಮ್ಡ್ ಸಮಸ್ಯೆ : ಸೋಮವಾರಪೇಟೆಯಲ್ಲಿ ರೈತರ ಬೃಹತ್ ಹೋರಾಟ

Share the Article

Protest: ಅರಣ್ಯ ಇಲಾಖೆಯ ಕ್ರಮದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ ರೈತ ಸಂಘಟನೆ ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ,ನಂತರ ರೈತರು ಜೆ.ಸಿ. ವೇದಿಕೆಯಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಂಡಿದ್ದಾರೆ.

ಸೋಮವಾರ ಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿರುವ ರೈತರು ನೆರೆಯ ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಯಿಂದಲೂ ರೈತ ಮುಖಂಡರು ಭಾಗಿಯಾಗಿದ್ದಾರೆ.

ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್, ರೈತಸಂಘದ ಅಧ್ಯಕ್ಷ ದಿನೇಶ್, ರಾಜ್ಯ ರೈತ ಸಂಘದ ನಾಯಕರಾದ ಹೊನ್ನೂರು ಪ್ರಕಾಶ್, ಕಿರಣ್ ಇವರುಗಳು ಕೂಡ ಈ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಹೋರಾಟಕ್ಕೆ ಆಗಮಿಸಿ ರೈತರ ಸಮಸ್ಯೆಗಳ ಕುರಿತು ಮಾತನಾಡಿದರು.

ಇದೇ ವೇಳೆ ಬೃಹತ್ ರೈತ ಸಂಘಟನೆಯ ಹೋರಾಟದಲ್ಲಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಈ ಎ. ಎಸ್ ಪೊನ್ನಣ್ಣನವರ ಕಾರ್ಯವೈಕರಿಯ ಕುರಿತು ರೈತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿರಾಜಪೇಟೆ ಶಾಸಕರು ಕಾನೂನು ಸಲಹೆಗಾರರೂ ಆಗಿರುವದಿಂದ ರೈತರ ಸಿ ಅಂಡ್ ಡಿ ಲ್ಯಾಂಡ್ ಸಮಸ್ಯೆಯನ್ನು ವಿಧಾನ ಸಭೆಯಲ್ಲಿ ಪ್ರಸ್ಥಾಪ ಮಾಡಿ ನಿರಂತರವಾಗಿ ಮುಖ್ಯಮಂತ್ರಿಗಳ ಜೊತೆ ಕೂತು ಸರಿ ಮಾಡಬಹುದಿತ್ತು.

ಆದರೇ ಯಾಕೆ ನೀವು ಇದುವರೆಗೆ ಈ ಬಗೆ ಪ್ರಸ್ಥಾಪ ಮಾಡುತ್ತಿಲ್ಲ..?? ರೈತರನ್ನು ನಿರಂತರವಾಗಿ ಸಮಸ್ಯೆಯಲ್ಲಿ ಮುಳುಗಿಸಿಕೊಂಡು ತಮ್ಮ ಅಧಿಕಾರವನ್ನು ಹಿಡಿದಿಟ್ಟುಕೊಳ್ಳಬಹುದು ಭಾವಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

Comments are closed.