Kannada: ಮದರಸಾಗಳಲ್ಲಿ ‘ಕನ್ನಡ’ ಕಲಿಸುವುದು ಕಡ್ಡಾಯ: ಸಚಿವ ಜಮೀರ್

Kannada: ರಾಜ್ಯದ ಎಲ್ಲ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕನ್ನಡ (kannada )ರಾಜ್ಯೋತ್ಸವ ವೇದಿಕೆಯಲ್ಲಿ ಮಾತನಾಡಿದ ಜಮೀರ್ ಅವರು, 90 ದಿನಗಳಲ್ಲಿ ರಾಜ್ಯದ ಎಲ್ಲ ಮದರಸಾಗಳಲ್ಲಿ ಕನ್ನಡ ಕಲಿಯಲು ಆದೇಶ ಮಾಡಲಾಗುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೇತೃತ್ವದಲ್ಲಿ ಕನ್ನಡ ಕಲಿಸುವುದಕ್ಕೆ ತೀರ್ಮಾನ ಮಾಡಲಾಗಿದೆ ಎಂದರು.

ಕರ್ನಾಟಕದಲ್ಲಿದ್ದು, ಕನ್ನಡ ಕಲಿಯದಿದ್ದರೆ ಇಷ್ಟು ವರ್ಷಗಳಿಂದ ಇಲ್ಲಿಯೇ ಇದ್ದರೂ ಉಪಯೋಗವಿಲ್ಲ. ಹಾಗಾಗಿ ಎಲ್ಲ ಮದರಸಾಗಳಲ್ಲಿ ಕನ್ನಡ ಕಲಿಸುವ ವ್ಯವಸ್ಥೆ ಮಾಡಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಉರ್ದು ಶಾಲೆಗಳಲ್ಲಿ ಮೂರು ಭಾಷೆಗಳು ಕಡ್ಡಾಯ ಇದ್ದವು. ಅದೇ ರೀತಿ ಈಗ ಮೊದಲ ಭಾಷೆಯಾಗಿ ಕನ್ನಡ ತೆಗೆದುಕೊಳ್ಳಬೇಕು. ಎರಡನೇ ಭಾಷೆಯಾಗಿ ಉರ್ದು ಹಾಗೂ ಮೂರನೇ ಭಾಷೆಯಾಗಿ ಇಂಗ್ಲಿಷ್ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು.
Comments are closed.