Namma Metro: ಯೆಲ್ಲೋ ಮಾರ್ಗದಲ್ಲಿ ಸಂಚಾರ ಆರಂಭಿಸಿದ 5ನೇ ರೈಲು

Namma Metro: ಮೆಟ್ರೋ ಪ್ರಯಾಣಿಕರಿಗೆ (Namma Metro) ಸಿಹಿ ಸುದ್ದಿ ಸಿಕ್ಕಿದೆ. ಇಂದಿನಿಂದ 5ನೇ ಹೊಸ ಮೆಟ್ರೋ ರೈಲು ಸಂಚಾರ ಆರಂಭಿಸಿದೆ.

ಆರ್.ವಿ.ರೋಡ್ ಮತ್ತು ಬೊಮ್ಮಸಂದ್ರ ಕಡೆ ತೆರಳುವ ಮೆಟ್ರೋ ರೈಲು ಇದಾಗಿದೆ. ಈ ಮೊದಲು ನಾಲ್ಕು ರೈಲು ಸೇವೆ ಇತ್ತು. ಇಂದಿನಿಂದ ಐದು ಮೆಟ್ರೋ ಸೇವೆ ಯೆಲ್ಲೋ ಲೈನ್ನಲ್ಲಿ (Yellow Line) ಲಭ್ಯವಿರಲಿದೆ. ಯೆಲ್ಲೋ ಲೈನ್ನಲ್ಲಿ ಪೀಕ್ ಅವರ್ನಲ್ಲಿ ರೈಲುಗಳು ಪ್ರತಿ 15 ನಿಮಿಷಕ್ಕೊಮ್ಮೆ ಸಂಚರಿಸಲಿವೆ.
ಹಿಂದಿನಂತೆ 19 ನಿಮಿಷಗಳ ಬದಲು ಈಗ 15 ನಿಮಿಷಕ್ಕೆ ಮೆಟ್ರೋ ಸೇವೆ ಇರಲಿದೆ. ಈ ಬದಲಾವಣೆ ಎಲ್ಲ ದಿನಗಳಿಗೂ ಅನ್ವಯವಾಗಲಿದೆ. ಮೊದಲ ಹಾಗೂ ಕೊನೆಯ ರೈಲು ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ.
Comments are closed.