Bharat Taxi: ಕೇಂದ್ರ ಸರ್ಕಾರದ ಭಾರತ್ ಟ್ಯಾಕ್ಸಿ ಸೇವೆ ಆರಂಭ; ಕಮಿಷನ್ಗೆ ಕಡಿವಾಣ

Bharat Taxi: ಓಲಾ, ಊಬರ್ ಸೇರಿದಂತೆ ಕೆಲವು ಖಾಸಗಿ ಕ್ಯಾಬ್ಗಳು ಚಾಲನೆಯಲ್ಲಿ ಇವೆ. ಆದರೆ ಅದೆಷ್ಟೋ ಬಾರಿ ಪ್ರಯಾಣಿಕರು ಕಿರಿಕಿರಿ ಅನುಭವಿಸುವುದು ಇದೆ. ಇನ್ನೊಂದೆಡೆ, ಪೀಕ್ ಅವರ್ಗಳಲ್ಲಿ ಹೆಚ್ಚು ದರ ವಸೂಳಿ ಮಾಡುವುದು ಚಾಲಕರಿಗೂ ಅನಿವಾರ್ಯವಾಗಿದೆ. ಏಕೆಂದರೆ ಎಲ್ಲೆಡೆ ಕಮಿಷನ್ ನೀಡಬೇಕಾಗಿರುವುದರಿಂದ ಅವರೂ ಕೂಡ ಲಾಭ ನೋಡಿಕೊಳ್ಳಲೇಬೇಕಿದೆ. ಮಾಲೀಕರಿಗೆ ಪ್ರತಿ ಪ್ರಯಾಣದ ಮೇಲೆ ಕಮಿಷನ್ ನೀಡುವುದು ಕಡ್ಡಾಯ ಆಗಿರುವ ಹಿನ್ನೆಲೆಯಲ್ಲಿ, ಅವರು ಹೆಚ್ಚಿನ ದರ ಪ್ರಯಾಣಿಕರ ಮೇಲೆ ಹಾಕಲೇಬೇಕಿದೆ. ಇದೀಗ ಇವೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರದ ಭಾರತ್ ಟ್ಯಾಕ್ಸಿ (Bharat Taxi)ಸೇವೆ ಆರಂಭಿಸಲಾಗುತ್ತಿದೆ. ನವೆಂಬರ್ ತಿಂಗಳಿನಿಂದಲೇ ಇದು ಕಾರ್ಯಾರಂಭ ಮಾಡಲಿದೆ.

ಕೇಂದ್ರ ಸರಕಾರದ ಸಹಕಾರ ಸಚಿವಾಲಯದ ಮಾರ್ಗದರ್ಶನದಲ್ಲಿ ಭಾರತ್ ಟ್ಯಾಕ್ಸಿ ಸೇವೆ ಸ್ಟಾರ್ಟ್ ಮಾಡಲಾಗಿದೆ. ಇದರ ಮುಖ್ಯ ಉದ್ದೇಶ, ಖಾಸಗಿ ಕ್ಯಾಬ್ ಸೇವೆಗಳ ಕಮಿಷನ್ ಹಾವಳಿ ತಪ್ಪಿಸುವುದು, ಈ ಮೂಲಕ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಪ್ರಯಾಣ ಸೇವೆಯನ್ನುಒದಗಿಸುವುದು. ಆರಂಭದಲ್ಲಿ 650 ಭಾರತ್ ಟ್ಯಾಕ್ಸಿ (Bharat Taxi) ರಸ್ತೆಗೆ ಇಳಿಯಲಿವೆ. ಮುಂಬೈ. ಪುಣೆ, ಭೋಪಾಲ್ , ಲಖನೌನಲ್ಲಿ ಆರಂಭ ಆಗಲಿದ್ದು, ಶೀಘ್ರದಲ್ಲಿಯೇ ಇದು ಎಲ್ಲಾ ಪ್ರಮುಖ ನಗರ ಪ್ರದೇಶಗಳ ರಸ್ತೆಗಳಲ್ಲಿ ರಾರಾಜಿಸಲಿವೆ. ಡಿಸೆಂಬರ್ ತಿಂಗಳಿನ ಒಳಗೆ ಬೇರೆ ಬೇರೆ ನಗರಗಳಿಗೂ ಇದು ಪ್ರವೇಶ ಮಾಡಲಿದೆ ಎಂದು ತಿಳಿಸಲಾಗಿದೆ. ಇದಾಗಲೇ ಐದು ಸಾವಿರ ಚಾಲಕರು ಭಾರತ್ ಟ್ಯಾಕ್ಸಿಯಲ್ಲಿ ಸೇವೆ ಒದಗಿಸಲಿದ್ದಾರೆ.
ಭಾರತ್ ಟ್ಯಾಕ್ಸಿಯಿಂದ ಚಾಲಕರು ಮತ್ತು ಪ್ರಯಾಣಿಕರು ಇಬ್ಬರಿಗೂ ಲಾಭ ಇದೆ ಎನ್ನಲಾಗುತ್ತಿದೆ.
Comments are closed.