BBK12: ಈ ವಾರದ ಕಳಪೆ ಅಶ್ವಿನಿ ಗೌಡ! ಟಾಸ್ಕ್‌ ಗೆದ್ದು ಕ್ಯಾಪ್ಟನ್‌ ಆದ ವೈಲ್ಡ್‌ಕಾರ್ಡ್‌ ಸ್ಪರ್ಧಿ ರಘು

Share the Article

BBK12: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಈ ವಾರದ ಕಳೆಪೆ ಅಶ್ವಿನಿ ಗೌಡ ಅವರಿಗೆ ನೀಡಲಾಗಿದೆ. ಈ ಕಳಪೆ ಪಟ್ಟವನ್ನು ಬಿಗ್‌ಬಾಸ್‌ ಕನ್ನಡದ ಮೊದಲ ಕ್ಯಾಪ್ಟನ್‌ ರಘು ಅವರು ಅಶ್ವಿನಿ ಗೌಡ ಅವರಿಗೆ ಕಳಪೆ ಪಟ್ಟವನ್ನು ನೀಡಿದ್ದಾರೆ.

ಈ ಕಳಪೆ ಪಟ್ಟ ಸಿಕ್ಕ ನಂತರ ಅಶ್ವಿನಿ ಅವರ ವರಸೆ ಬದಲಾಗಿದೆ. ಬಿಗ್‌ಬಾಸ್‌ ರೂಲ್ಸ್‌ ಪ್ರಕಾರ ಜೈಲಿನಲ್ಲಿರುವವರು ತರಕಾರಿ ಕಟ್‌ ಮಾಡಿ ಕೊಡಬೇಕು. ಆದರೆ ಅವರು ಕಟ್‌ ಮಾಡದೇ ಸುಮ್ಮನೇ ಕೂತಿದ್ದಾರೆ. ಇದಕ್ಕೆ ಮುಂದೆ ಬಿಗ್‌ಬಾಸ್‌ ಏನಾದರೂ ಹೇಳ್ತಾರಾ? ನೋಡಬೇಕು.

ಕಳೆದ ಸೀಸನ್‌ನಲ್ಲಿ ರಜತ್‌ ಕೂಡಾ ಕಳಪೆ ಪಟ್ಟ ತೆಗೆದುಕೊಂದು ಜೈಲಿಗೆ ಹೋದಾಗ ಇದೇ ರೀತಿ ತರಕಾರಿ ಕಟ್‌ ಮಾಡಲ್ಲ ಎಂದು ಹಠ ಹಿಡಿದಿದ್ದು, ನಂತರ ಪ್ರತಿಸ್ಪರ್ಧಿಗಳು ಬಿಗ್‌ಬಾಸ್‌ ಮೊರೆ ಹೋಗಿದ್ದರು. ಇದನ್ನು ವಾರದ ಕಥೆಯಲ್ಲಿ ಉಚ್ಛರಿಸಿದ ಸುದೀಪ್‌ ಇನ್ನು ತರಕಾರಿ ಕೊಟ್ಟ 15 ನಿಮಿಷದೊಳಗೆ ಕಟ್‌ ಮಾಡಿ ಮನೆ ಮಂದಿಗೆ ಕೊಡಬೇಕು ಎಂದು ಹೇಳಿದರು. ಈ ಬಾರಿ ಕೂಡಾ ಇದೇ ರೀತಿ ಆಗುತ್ತಾ ಕಾದು ನೋಡಬೇಕು.

 

Comments are closed.