Actor Shahrukh Khan: ನಟ ಶಾರುಖ್‌ ಖಾನ್‌ ಮನೆಯಲ್ಲಿ ಲಕ್ಷ್ಮೀ ಪೂಜೆ ಸಂಭ್ರಮ

Share the Article

Actor Shahrukh Khan: ಶಾರುಖ್ ಖಾನ್ ತಮ್ಮ ಪತ್ನಿ ಖಾತೆಯಲ್ಲಿ ಪತ್ನಿ ಗೌರಿ ಖಾನ್ ದೀಪಾವಳಿ ಪೂಜೆ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಗೌರಿಯ ಮುಖ ಕಾಣಿಸುತ್ತಿಲ್ಲ. ಫೋಟೋ ಜೊತೆಗೆ ಕಿಂಗ್ ಖಾನ್ “ಎಲ್ಲರಿಗೂ ದೀಪಾವಳಿ ಶುಭಾಶಯಗಳು!” ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಲಕ್ಷ್ಮಿ ದೇವಿಯು ನಿಮಗೆ ಸಮೃದ್ಧಿ ಮತ್ತು ಸಂತೋಷವನ್ನು ದಯಪಾಲಿಸಲಿ. ಎಲ್ಲರಿಗೂ ಪ್ರೀತಿ, ಬೆಳಕು ಮತ್ತು ಶಾಂತಿಯನ್ನು ಹಾರೈಸುತ್ತೇನೆ.”

ನಟನ ಪೋಸ್ಟ್ ಭಾರೀ ವೈರಲ್ ಆಗಿದ್ದು ಮತ್ತು ಅಭಿಮಾನಿಗಳು ಶುಭಾಶಯಗಳು, ಹೃದಯದ ಎಮೋಜಿಗಳು ಮತ್ತು ಸಿಹಿ ಸಂದೇಶಗಳನ್ನು ನಟನಿಗೆ ಕಳುಹಿಸಿದ್ದಾರೆ. ಶಾರುಖ್ ಅವರ ಸರಳತೆ ಮತ್ತು ಆತ್ಮೀಯತೆಯನ್ನು ಹಲವರು ಶ್ಲಾಘಿಸಿ, ಅದನ್ನು “ಶುದ್ಧ ಮನ್ನತ್ ವೈಬ್ಸ್” ಎಂದು ಬರೆದಿದ್ದಾರೆ.

Comments are closed.