BBK-12 : ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲು ಟೀಮ್ ರೆಡಿ – ನಡು ಮಧ್ಯೆ ದೊಡ್ಮನೆಗೆ ಬರೋದು ಇವರೇ ನೋಡಿ !!


BBK-12 : ಕನ್ನಡ ಕಿರುತೆರೆಯ ಜನಪ್ರಿಯ ಶುರುವಾಗಿರುವ ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ಕನ್ನಡಿಗರ ಮನ ಗೆದ್ದಿದೆ. ಈಗಾಗಲೇ ಮೂವರು ಅಭ್ಯರ್ಥಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲು ಟೀಮ್ ರೆಡಿಯಾಗಿದೆ ಎನ್ನಲಾಗಿದೆ.
ಹೌದು, ಇದೀಗ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಪ್ರವೇಶಿಸಲು ಮೊದಲ ಬ್ಯಾಚ್ ರೆಡಿ ಆಗಿದೆಯಂತೆ. ಹೀಗೆಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಹಾಗಾದರೆ, ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಪ್ರವೇಶಿಸುವ ಸದಸ್ಯರು ಯಾರೆಲ್ಲ ಇರಬಹುದು ಎಂಬುದನ್ನು ನೋಡೋಣ.
• ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ರಾಮಾಚಾರಿ ಸೀರಿಯಲ್ನಲ್ಲಿ ರುಕ್ಮಿಣಿ ಪಾತ್ರದಲ್ಲಿ ನಟಿಸಿದ್ದ ದೇವಿಕಾ ಭಟ್ ಅವರು ಬಿಗ್ ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಮೂಲಕ ಹೋಗಿದ್ದಾರಂತೆ.
• ಬಿಗ್ ಬಾಸ್ ಶುರುವಾಗುವ ಸಂದರ್ಭ ವಿಜಯ್ ಸೂರ್ಯ ಅವರು ಶೋಗೆ ಹೋಗ್ತಾರೆ ಎನ್ನಲಾಗಿತ್ತು, ಆದರೆ ಅವರು ಹೋಗಿರಲಿಲ್ಲ. ಈ ಬಾರಿ ಅವರು ವೈಲ್ಡ್- ಕಾರ್ಡ್ ಮೂಲಕ ದೊಡ್ಮನೆ ಒಳಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
• ರಾಮಾಚಾರಿ ಸೀರಿಯಲ್ ಖ್ಯಾತಿಯ ಮೌನಾ ಗುಡ್ಡೇಮನೆ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ ಎನ್ನಲಾಗಿದೆ.
• ರಾಧಾ ರಮಣ ಸೀರಿಯಲ್ ಖ್ಯಾತಿಯ ಶ್ವೇತಾ ಪ್ರಸಾದ್ ಸಹ ಬಿಗ್ ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಮೂಲಕ ಕಾಲಿಟ್ಟಿದ್ದಾರಂತೆ.
• ಮಾಂಗಲ್ಯಂ ತಂತುನಾನೇನ ಧಾರಾವಾಹಿ ನಟ ಆರ್ ಕೆ ಚಂದನ್ ಅವರು ಕೂಡ ಈ ವೀಕೆಂಡ್ ಮನೆಯೊಳಗೆ ತೆರಳಲಿದ್ದಾರಂತೆ.
Comments are closed.