V Somanna: ನನಗೆ ಹಿಂದಿ ಬರಲ್ಲ, ಮಂತ್ರಿ ಪಟ್ಟ ಬೇಡ ಎಂದಿದ್ದ ವಿ ಸೋಮಣ್ಣ – ಪ್ರಧಾನಿ ಮೋದಿ ಕೊಟ್ಟ ಉತ್ತರ ಹೀಗಿತ್ತು ನೋಡಿ


V Somanna: ವಿ ಸೋಮಣ್ಣ ಅವರು ರಾಜ್ಯ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಒಬ್ಬ ಉತ್ತಮ ರಾಜಕಾರಣಿ. ಸದ್ಯ ಅವರು ಕೇಂದ್ರ ಮಂತ್ರಿ ಆಗಿದ್ದಾರೆ. ಆದರೆ ಆರಂಭದಲ್ಲಿ ಅವರು ನನಗೆ ಹಿಂದಿ ಬರುವುದಿಲ್ಲ ಹೀಗಾಗಿ ಮಂತ್ರಿ ಪಟ್ಟ ಬೇಡ ಎಂದು ಹೇಳಿದರಂತೆ. ಇದಕ್ಕೆ ಪ್ರಧಾನಿ ಮೋದಿ ಯಾವ ರೀತಿ ಉತ್ತರ ಕೊಟ್ಟಿದ್ದರು ಎಂಬುದನ್ನು ಇದೀಗ ಸ್ವತಹ ಸೋಮಣ್ಣ ಅವರೇ ಬಹಿರಂಗಪಡಿಸಿದ್ದಾರೆ.
ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರಗಳಲ್ಲಿ ನಿಂತು ಹೀನಾಯವಾಗಿ ಸೋಲುಂಡಿದ್ದ ವಿ ಸೋಮಣ್ಣ ಅವರು. ಈ ಸಂದರ್ಭದಲ್ಲಿ ಅವರ ಕೈ ಹಿಡಿದಿದ್ದು ಲೋಕಸಭಾ ಚುನಾವಣೆ. ತುಮಕೂರಿನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯಭೇರಿ ಸಾಧಿಸಿದ ಸೋಮಣ್ಣ ಅವರಿಗೆ ಮತ್ತೆ ಅದೃಷ್ಟವೆಂಬಂತೆ ಕೇಂದ್ರದ ಮಂತ್ರಿ ಪಟ್ಟ ಒಲಿದು. ಈ ವೇಳೆ ಸೋಮಣ್ಣ ಅವರು ನನಗೆ ಹಿಂದಿ ಬರುವುದಿಲ್ಲ. ನಾನು ಮಂತ್ರಿ ನಾನು ಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಹೇಳಿದರಂತೆ. ಆಗ ಪ್ರಧಾನಿ ಮೋದಿಯವರು ಏನೆಂದು ಉತ್ತರಿಸಿದರು ಎಂದು ಇದೀಗ ಅವರು ತಿಳಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಸೋಮಣ್ಣ ಅವರು “ನಾವು ಹಳ್ಳಿಯಿಂದ ಬಂದವರು, ಕನ್ನಡ ಸರ್ಕಾರೀ ಶಾಲೆಯಲ್ಲಿ ಓದಿದವರು. ನಾವು ಶಾಲೆಗೆ ಹೋಗುತ್ತಿದ್ದ ವೇಳೆ, ಹಿಂದಿ ಇರಲಿಲ್ಲ. ಹಾಗಾಗಿ, ನನಗೆ ಚೂರೇಚೂರು ಹಿಂದಿ ಬರುತ್ತಿರಲಿಲ್ಲ. ಪ್ರಧಾನಿಯವರು ಕರೆದ ಹಿನ್ನಲೆಯಲ್ಲಿ ಅಲ್ಲಿಗೆ ಹೋದೆ. ನಿಮ್ಮನ್ನು ಮಂತ್ರಿ ಮಾಡುತ್ತಿದ್ದೇವೆ, ಅದಕ್ಕೆ ತಯಾರಿಗಿರಿ ಎಂದು ಹೇಳಿದರು. ನನಗೆ ಒಂದು ಕ್ಷಣ ಶಾಕ್, ಆದರೂ, ನನಗೆ ಮಂತ್ರಿಗಿರಿ ಬೇಡ ಎಂದೆ. ಅದಕ್ಕೆ ಯಾಕೆ ಎಂದು ಕೇಳಿದರು, ಆಗ ನಾನು ನನಗೆ ಹಿಂದಿ ಬರುವುದಿಲ್ಲ ಎಂದು ಹೇಳಿದೆ” ಎಂದು ಸೋಮಣ್ಣ ಅಂದಿನ ವಿದ್ಯಮಾನವನ್ನು ವಿವರಿಸಿದರು.
ಮುಂದುವರಿಯುತ್ತಾ, ” ಯಾವುದು ಭಾಷೆ, ಎಲ್ಲಾ ಭಾಷೆಯೂ ಒಂದೇ. ನಮಗಿರಬೇಕಾದ ಒಂದು ಭಾಷೆ ಎಂದರೆ ಅದು ಕಾಮನ್ ಸೆನ್ಸ್. ಹೋಗಿ, ಪ್ರಮಾಣವಚನ ಸ್ವೀಕರಿಸಲು ಸಿದ್ದತೆಯನ್ನು ಮಾಡಿಕೊಳ್ಳಿ. ನೀವು ಉತ್ತಮವಾಗಿ ಕೆಲಸ ಮಾಡುತ್ತೀರಾ ಎನ್ನುವ ನಂಬಿಕೆಯಿದೆ ಇಂದು ಪ್ರಧಾನಿ ಮೋದಿ ಹೇಳಿದ್ದರಂತೆ.. ಇದನ್ನು ಈಗ ಸೋಮಣ್ಣ ಹೇಳಿದ್ದಾರೆ.
Comments are closed.