SSLC, ದ್ವಿತೀಯ ಪಿಯುಸಿ ಪರೀಕ್ಷೆ-1: ಖಾಸಗಿ, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿಗೆ ಅರ್ಜಿ ಆಹ್ವಾನ

SSLC Second Puc Exam: 2025-26ನೇ ಸಾಲಿನ SSLC & ದ್ವಿತೀಯ ಪಿಯುಸಿ ಪರೀಕ್ಷೆ-1 ಕ್ಕೆ ಹಾಜರಾಗಲು ಖಾಸಗಿ ಅಭ್ಯರ್ಥಿಗಳು, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಮತ್ತು ಶಾಲಾ/ಕಾಲೇಜು ಪುನರಾವರ್ತಿತ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನಿಂದ ಅಭ್ಯರ್ಥಿಗಳೇ ನೇರವಾಗಿ ಪರೀಕ್ಷೆಗೆ ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ತಮ್ಮ ವಿವರಗಳನ್ನು ಮಂಡಳಿಯ https://kseeb.karnataka.gov.in ಜಾಲತಾಣದಲ್ಲಿ ಅಕ್ಟೋಬರ್ 15 ರಿಂದ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯದ ಅಧ್ಯಕ್ಷರು ಈ ಕುರಿತು ವಿವರವಾದ ಮಾರ್ಗಸೂಚಿ ಜಾಲತಾಣದಲ್ಲಿ ಲಭ್ಯವಿದೆ ಎಂದು ತಿಳಿಸಿದ್ದಾರೆ.
Comments are closed.