Tata: ದೀಪಾವಳಿಗೆ ಭರ್ಜರಿ ಆಫರ್ ಘೋಷಿಸಿದ ಟಾಟಾ – ಕಾರುಗಳ ಮೇಲೆ 1.90 ಲಕ್ಷ ಡಿಸ್ಕೌಂಟ್

Tata: ದೀಪಾವಳಿ ಹಬ್ಬವೆಂದರೆ ಇಡೀ ದೇಶಕ್ಕೆ ಒಂದು ಸಂಭ್ರಮ. ಈಗಾಗಲೇ ದೀಪಾವಳಿ ಹತ್ತಿರವಾಗಿದ್ದು ಇಡೀ ದೇಶದ ಜನ ಹಬ್ಬದ ಆಚರಣೆಗೆ ಕಾದು ಕುಳಿತಿದೆ. ಇನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅನೇಕರು ಹೊಸ ಹೊಸ ವಸ್ತುಗಳನ್ನು ಖರೀದಿಸುತ್ತಾರೆ. ಅದರಲ್ಲೂ ಚಿನ್ನ, ಬೆಳ್ಳಿ ಹಾಗೂ ವಾಹನಗಳನ್ನು ಖರೀದಿಸುವುದುಂಟು. ಹೀಗಾಗಿ ಈ ಸಂದರ್ಭದಲ್ಲಿ ಅನೇಕ ಕಂಪನಿಗಳು ಕಾರು ಹಾಗೂ ಬೈಕುಗಳ ಮೇಲೆ ಭಾರಿ ಡಿಸ್ಕೌಂಟ್ ಘೋಷಿಸುತ್ತವೆ. ಅಂತಯೇ ಇದೀಗ ಟಾಟಾ ಕೂಡ ತನ್ನ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ್ದು ಗ್ರಾಹಕರನ್ನು ಸಂತೋಷಪಡಿಸಲು ಮುಂದಾಗಿದೆ.

ಹೌದು, ಟಾಟಾ ಮೋಟಾರ್ಸ್ ಇದೀಗ ದೀಪಾವಳಿ ಹಬ್ಬಕ್ಕೆ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈಗಾಗಲೇ ಜಿಎಸ್‌ಟಿ ಕಡಿತದಿಂದ ಕಾರುಗಳ ಬೆಲೆ ಇಳಿಕೆಯಾಗಿದೆ. ಇದರ ಜೊತೆಗೆ ಇದೀಗ ದೀಪಾವಳಿ ಡಿಸ್ಕೌಂಟ್ ಆಫರ್ ಸೇರಿಕೊಂಡಿರುವುದು ಗ್ರಾಹಕರ ಸಂಭ್ರಮ ಡಬಲ್ ಮಾಡಿದೆ. ಅಂದಹಾಗೆ ಇವೆರಡು ಸೇರಿ ಇದೀಗ ಕಾರುಗಳ ಮೇಲೆ ಭರ್ಜರಿಯಾಗಿ ಗರಿಷ್ಠ 1.90 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.
ಯಾವೆಲ್ಲ ಕಾರುಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ?
* ಟಾಟಾ ಅಲ್ಟ್ರೋಜ್ ಕಾರಿನ ಮೇಲೆ ಗರಿಷ್ಠ 1 ಲಕ್ಷ ರೂ ಡಿಸ್ಕೌಂಟ್ ನೀಡಲಾಗಿದೆ. ಗ್ರಾಹಕರ ಬೆನಿಫಿಟ್ ಹಾಗೂ ಎಕ್ಸ್‌ಚೇಂಜ್ ಬೋನಸ್ ಸೇರಿ 1 ಲಕ್ಷ ರೂ ಡಿಸ್ಕೌಂಟ್ ನೀಡಲಾಗಿದೆ.
* ಅಲ್ಟ್ರೋಜರ್ ರೇಸರ್ ವೇರಿಯೆಂಟ್ MY2024 ಮಾಡೆಲ್ ಕಾರಿನ ಮೇಲೆ 1.35 ಲಕ್ಷ ರೂಪಾಯಿ ಒಟ್ಟು ಡಿಸ್ಕೌಂಟ್ ನೀಡಲಾಗಿದೆ.
* ಟಾಟಾ ನೆಕ್ಸಾನ್ ಪೆಟ್ರೋಲ್, ಸಿಎನ್‌ಜಿ ಹಾಗೂ ಡೀಸೆಲ್ ಕಾರು 35,000 ರೂಪಾಯಿ ಕನ್ಸೂಮರ್ ಡಿಸ್ಕೌಂಟ್ ಹಾಗೂ 10,000 ಎಕ್ಸ್‌ಚೇಂಜ್ ಬೋನಸ್ ಸೇರಿ ಒಟ್ಟು 45,000 ರೂಪಾಯಿ ಆಫರ್ ನೀಡಲಾಗಿದೆ.
* ಟಾಟಾ ಪಂಚ್ ಸಿಎನ್‌ಜಿ ಹಾಗೂ ಪೆಟ್ರೋಲ್ ವೇರಿಯೆಂಟ್ ಕಾರಿನ ಮೇಲೆ 25,000 ಡಿಸ್ಕೌಂಟ್ ನೀಡಲಾಗಿದೆ.
* ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಕಾರಿನ ಮೇಲೆ ಕನ್ಸೂಮರ್ ಆಫರ್ 50,000 ರೂಪಾಯಿ ಹಾಗೂ ಎಕ್ಸ್‌ಚೇಂಜ್ ಬೋನಸ್ 25,000 ರೂಪಾಯಿ ಸೇರಿ 75,000 ರೂಪಾಯಿ ಒಟ್ಟು ಆಫರ್ ನೀಡಲಾಗಿದೆ.
* ಕರ್ವ್ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಮೇಲೆ 30,000 ರೂಪಾಯಿ ಆಫರ್ ನೀಡಲಾಗಿದೆ.
ಅಂದಹಾಗೆ ಟಾಟಾ ದೀಪಾವಳಿ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಸದ್ಯ ಆಫರ್ ಆರಂಭಗೊಂಡಿದೆ. ಅಕ್ಟೋಬರ್ 21ರ ವರೆಗೆ ಈ ಆಫರ್ ಇರಲಿದೆ. ಆಫರ್ ನಗದು ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ ಹಾಗೂ ಸ್ಕ್ರಾಪೇಜ್ ಬೆನಿಫಿಟ್ ಒಳಗೊಂಡಿರಲಿದೆ.
Comments are closed.