NCB: ಎನ್‌ಸಿಬಿ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ಕೋಟಿ ರೂ ಮೌಲ್ಯದ ಡ್ರಗ್ಸ್‌ ಜಪ್ತಿ

Share the Article

NCB: ಬೆಂಗಳೂರು ವಲಯದ ಎನ್‌ಸಿಬಿ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 50ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ. ಮೂವರು ಆರೋಪಿಗಳನ್ನು ಅಧಿಕಾರಿಗಳು ಬಂಧನ ಮಾಡಿದ್ದಾರೆ.

ಒಟ್ಟು 45 ಕೆಜಿ ಹೈಡ್ರೋಗಾಂಜಾ, 6 ಕೆಜಿ ಸೈಲೋಸಿಬಿನ್‌ ಅಣಬೆ ಸೀಜ್‌ ಮಾಡಲಾಗಿದೆ. ಥೈಲ್ಯಾಂಡ್‌ನಿಂದ ಡ್ರಗ್ಸ್‌ ಸಾಗಾಟ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡಿದ್ದಾರೆ. ಅ.9 ರಂದು ಕೊಲಂಬೋದಿಂದ ಬರುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:Rahul Gandhi : ‘ಭಾರತದ ಶಿಕ್ಷಣ ವ್ಯವಸ್ಥೆ ಮೇಲ್ವರ್ಗದ ಪರಃ ಎಂದ ರಾಹುಲ್ – ಹಾಗಿದ್ದರೆ 60ವರ್ಷ ಏನು ದಬಾಕಿದ್ರಿ? ಎಂದ ಜನ

ವಿಚಾರಣೆ ಸಂದರ್ಭ ವಿಮಾನದಲ್ಲಿ ಹ್ಯಾಂಡ್ಲರ್‌ ಶ್ರೀಲಂಕಾದಿಂದ ಬರುವ ಮಾಹಿತಿ ಸಿಕ್ಕಿತ್ತು. ಹಾಗಾಗಿ ಕಾದು ಕೊಂಡಿದ್ದು, ಇನ್ನೋರ್ವ ಶ್ರೀಲಂಕಾ ಪ್ರಜೆಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಶ್ರೀಲಂಕಾದ ಹ್ಯಾಂಡ್ಲರ್‌ನಿಂದ ತಂದಿದ್ದ 14 ಕೆಜಿ ಹೈಡ್ರೋಗಾಂಜಾ, 2 ಕೆಜಿ ಅಣಬೆ, 250 ಫುಡ್‌ ಟಿನ್‌ಗಳಲ್ಲಿ ತಂದಿದ್ದ ಡ್ರಗ್ಸನ್ನು ವಶಕ್ಕೆ ಪಡೆದಿದ್ದಾರೆ.

Comments are closed.