Belthangady: ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣ: ಚಿನ್ನಯ್ಯ ಪತ್ನಿ ನಂತರ ಸಹೋದರಿ ವಿಚಾರಣೆಗೆ ಹಾಜರು

Share the Article

Belthangady: ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಚಿನ್ನಯ್ಯನ ಸಹೋದರಿ ರತ್ನಾ ಅವರು ಸೋಮವಾರ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಮಾಧ್ಯಮದವರನ್ನು ಕಂಡ ರತ್ನಾ ಅವರು, ಎಸ್‌ ಐಟಿ ಕಚೇರಿಯೊಳಗೆ ಓಡಿಕೊಂಡು ಹೋಗಿದ್ದಾರೆ. ಇದಕ್ಕೂ ಮುನ್ನ ಚಿನ್ನಯ್ಯನ ಪತ್ನಿ ಮಲ್ಲಿಕಾ ಕೂಡಾ ವಿಚಾರಣೆಗಾಗಿ ಎಸ್‌ಐಟಿ ಕಚೇರಿಗೆ ಆಗಮಿಸಿದ್ದರು.

ತನಿಖೆಯ ಭಾಗವಾಗಿ ಚಿನ್ನಯ್ಯನ ಪತ್ನಿ ಮಲ್ಲಿಕಾ, ಸಹೋದರಿ ರತ್ನಾ ಅವರನ್ನು ವಿಚಾರಣೆ ಮಾಡಲಾಗಿದೆ. ಇದು ಬುರುಡೆ ಪ್ರಕರಣಕ್ಕೆ ಹೊಸ ತಿರುವು ಸಿಗಲಿದೆಯೇ ಎನ್ನುವುದು ತನಿಖೆ ಮೂಲಕ ತಿಳಿದು ಬರಬೇಕಿದೆ.

ಇದನ್ನೂ ಓದಿ:KGF-3 ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಟ ಯಶ್!!

Comments are closed.