Cough Syrup: ಕೆಮ್ಮಿನ ಸಿರಪ್‌ನಿಂದ ಮಕ್ಕಳ ಸಾವು ಪ್ರಕರಣ: ಸ್ರೇಸನ್ ಫಾರ್ಮಾ ಬಂದ್, ಕೋಲ್ಡ್ರಿಫ್ ಸಿರಪ್ ಲೈಸೆನ್ಸ್ ರದ್ದು

Cough Syrup: ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಅನ್ನು ಸ್ಥಗಿತ ಮಾಡಲಾಗಿದ್ದು, ಮತ್ತು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಉತ್ಪಾದನಾ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.

ಮಧ್ಯಪ್ರದೇಶದಾದ್ಯಂತ ಕನಿಷ್ಠ 24 ಮಕ್ಕಳ ಸಾವಿಗೆ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ಗೆ ಸಂಬಂಧಿಸಿದೆ. ಹೆಚ್ಚಿನ ವಿಷಕಾರಿ ಕೈಗಾರಿಕಾ ದ್ರಾವಕವಾದ ಡೈಥಿಲೀನ್‌ಗ್ಲೈಕಾಲ್ ಇರುವುದು ಕಂಡು ಬಂದಿದೆ. ಈಗಾಗಲೇ ಹಲವಾರು ರಾಜ್ಯಗಳು ಈ ಕೆಮ್ಮಿನ ಸಿರಪನ್ನು ನಿಷೇಧ ಮಾಡಿದೆ.
ಮಕ್ಕಳ ಸಾವಿನ ವರದಿಯ ನಂತರ ತಮಿಳುನಾಡು ಮೂಲಕ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ನ ಮಾಲೀಕ ರಂಗನಾಥನ್ ಗೋವಿಂದನ್ ಅವರನ್ನು ಬಂಧನ ಮಾಡಿ 10 ದಿನಗಳ ಪೊಲೀಸ್ ಕಸ್ಟಡಿಗೆ ಒಳಪಡಿಸಲಾಗಿದೆ.
Comments are closed.