Mangalore: Muslim ಕ್ಯಾಬ್‌ ಚಾಲಕನಿಗೆ ʼಭಯೋತ್ಪಾದಕʼ ಎಂದು ಕರೆದ ಕೇರಳ ನಟನ ಬಂಧನ

Share the Article

Mangalore: ಮುಸ್ಲಿಂ ಕ್ಯಾಬ್‌ ಚಾಲಕನನ್ನು ನೀನು ಭಯೋತ್ಪಾದಕ ಎಂದು ಕರೆದ ಆರೋಪದಲ್ಲಿ ಮಲಯಾಳಂ ನಟ ಜಯಕೃಷ್ಣನ್‌, ಸಂತೋಷ್‌ ಅಬ್ರಹಾಂ, ವಿಮಲ್‌ ಎಂಬ ಮೂವರು ಕೇರಳಿಗರ ವಿರುದ್ಧ ಮಂಗಳೂರಿನ ಉರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಈ ಕುರಿತು ಉರ್ವಾ ಪೊಲೀಸರು ನಟ ಜಯಕೃಷ್ಣನ್‌ ಹಾಗೂ ಸಂತೋಷ್‌ ಅಬ್ರಹಾಂನನ್ನು ಬಂಧನ ಮಾಡಿ ವಿಚಾರಣೆ ಮಾಡುತ್ತಿದ್ದಾರೆ.

ಅ.9 ರ ರಾತ್ರಿ ನಟ ಜಯಕೃಷ್ಣನ್‌ ಉಬರ್‌ ಮತ್ತು ರಾಪಿಡೋ ಕ್ಯಾಪ್ಟನ್‌ ಅಪ್ಲಿಕೇಶನ್‌ಗಳ ಮೂಲಕ ಕ್ಯಾಬ್‌ ಬುಕ್‌ ಮಾಡಿದ್ದು, ಪಿಕಪ್‌ ವಿಳಾಸವನ್ನು ಮಂಗಳೂರು ಬಿಜೈ ನ್ಯೂ ರೋಡ್‌ ಎಂದು ನೀಡಿದ್ದರು. ಕ್ಯಾಬ್‌ ಚಾಲಕ ಅಹ್ಮದ್‌ ಶಫೀಕ್‌ (ದೂರುದಾರ) ಪಿಕಪ್‌ ಸ್ಥಳವನ್ನು ದೃಢೀಕರಿಸಲು ಅವರನ್ನು ಸಂಪರ್ಕ ಮಾಡಿದ್ದಾರೆ.

ಆಗ ಆರೋಪಿ ನಟ ಹಿಂದಿಯಲ್ಲಿ ಮಾತನಾಡುತ್ತಾ, ಅಹ್ಮದ್‌ಗೆ ಅಪಹಾಸ್ಯ ಮಾಡಿದ್ದು, ಕ್ಯಾಬ್‌ ಚಾಲಕನನ್ನು ಮುಸ್ಲಿಂ ಉಗ್ರಗಾಮಿ ಮತ್ತು ಭಯೋತ್ಪಾದಕ ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ. ನನ್ನ ತಾಯಿಯನ್ನು ಕೂಡಾ ಗುರಿಯಾಗಿಸಿ ಮಲಯಾಳಂನಲ್ಲಿ ಅವಾಚ್ಯ ಭಾಷೆ ಬಳಕೆ ಮಾಡಿದ್ದಾರೆ ಎಂದು ದೂರನ್ನು ನೀಡಿದ್ದಾನೆ.

ಇದನ್ನೂ ಓದಿ:BBK 12: ಬಿಗ್‌ಬಾಸ್‌ ಅಂದ್ರೇನು? ರಕ್ಷಿತಾ ಹೇಳ್ತಾರೆ….

ಅಹ್ಮದ್ ಶಫೀಕ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 352 ಮತ್ತು 353(2) ರ ಅಡಿಯಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲಯಾಳಂ ನಟ ಜಯಕೃಷ್ಣನ್ ಮತ್ತು ಅವರ ಸಹಚರರಾದ ವಿಮಲ್ ಮತ್ತು ಸಂತೋಷ್ ಅವರು ಕ್ಯಾಬ್ ಚಾಲಕನ ವಿರುದ್ಧ ಕೋಮು ನಿಂದನೆ ಮಾಡಿದ್ದಾರೆ ಎನ್ನಲಾದ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ ಎಂದು ವರದಿಯಾಗಿದೆ.

Comments are closed.