Viral Video : ಹೊರಗಿದ್ದಾಗ ಯಾರ ಜೊತೆ ಬೆಡ್ ಹತ್ತಬೇಕು, ಹತ್ತಬಾರ್ದು ಅಂತ ಯೋಚಿಸಿದ್ರೆ ಈ ಸ್ಥಿತಿ ಬರ್ತಿರ್ಲಿಲ್ಲ – ದರ್ಶನ್ ಕುರಿತು ಯುವತಿ ಹೇಳಿಕೆ ವೈರಲ್

Viral Video : ರೇಣುಕಾ ಸ್ವಾಮಿ ಕೊಲೆ ಪ್ರಕರಣದಡಿ ಆರೋಪಿಯಾಗಿ ನಟ ದರ್ಶನ್ ಅವರು ಇದೀಗ ಮತ್ತೆ ಜೈಲು ಪಾಲಾಗಿದ್ದಾರೆ. ಜೈಲು ಸೇರಿದ ಬಳಿಕ ದರ್ಶನ್ ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು ಸಾಕಷ್ಟು ಆರೋಗ್ಯ ಸಮಸ್ಯೆಗಳು ಕೂಡ ಎದುರಾಗಿದೆ. ಅಲ್ಲದೆ ಹಾಸಿಗೆ, ಬೆಡ್ ಶೀಟ್ ಅಗತ್ಯ ಸೌಲಭ್ಯ ನೀಡಿಲ್ಲ ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ಜೈಲಾಧಿಕಾರಿಗಳ ಮೇಲೆ ಆರೋಪಿಸಿದ್ದರು. ಇದೀಗ ಈ ಬೆಡ್ ವಿಚಾರವಾಗಿ ಮತ್ತು ದರ್ಶನ್ ಪ್ರಕರಣದ ಕುರಿತಾಗಿ ಯುವತಿ ಒಬ್ಬಳು ಕೊಟ್ಟ ಸ್ಟೇಟ್ಮೆಂಟ್ ಸಾಕಷ್ಟು ವೈರಲಾಗುತ್ತಿದೆ.

ಹೌದು, ದರ್ಶನ್ ಜೈಲಿನಲ್ಲಿ ಬೆಡ್ ಗಾಗಿ ಪರದಾಡಿದ್ದು ಗೊತ್ತೇ ಇದೆ. ಇದೇ ಬೆಡ್ ವಿಚಾರ ಮುಂದಿಟ್ಟುಕೊಂಡು ಯುವತಿಯೊಬ್ಬರು ಜ್ಯೂಸ್ ಕುಡಿಯುತ್ತ ಮಾತನಾಡಿ ವಿಡಿಯೋ ವೈರಲ್ ಅನ್ನು ಮೂವಿ ಮ್ಯಾಜಿಕ್ ನ್ಯೂಸ್ ಪೋಸ್ಟ್ ಮಾಡಿದೆ. ವೈರಲ್ ಆದ ವಿಡಿಯೋದಲ್ಲಿ “ಏನು ದರ್ಶನ್‌ಗೆ ಜೈಲಲ್ಲಿ ಬೆಡ್ ಸಿಗ್ತಿಲ್ಲವಾ!, ಆಚೆ (ಹೊರಗಿದ್ದಾಗ) ಇರೋವಾಗ ಯಾರ ಜೊತೆ ಬೆಡ್ ಹತ್ತಬೇಕು, ಹತ್ತಬಾರದು ಎಂದು ಯೊಚಿಸಿ ಜೀವನ ಮಾಡಿದ್ದರೆ. ಇವತ್ತು ಜೈಲಲ್ಲಿ ಬೆಡ್ ಗೆ ಪರದಾಡೋ ದಿನ ಬರುತ್ತಿರಲಿಲ್ಲ’ ಎಂದು ಆ ಯುವತಿ ಹೇಳಿದ್ದಾರೆ.
https://www.instagram.com/reel/DPqv9i2k3fl/?igsh=MXZ2MHh2bzljOW1sNg==
ಮುಂದುವರಿದು, “ಆಯುರ್ವೇಧದ ಪ್ರಕಾರ ಹಾಸಿಗೆ ಇಲ್ಲದೇ ಫ್ಲಾಟ್ ಸರ್ಫೇಸ್ ಮೇಲೆ (ನೆಲ) ಮಲಗಿದರೆ ಬೆನ್ನು ನೋವು ವಾಸಿಯಾಗುತ್ತಂತೆ. ಅಣ್ಣಂಗೆ ಬೆನ್ನು ನೋವು ವಾಸಿಯಾಗಬೇಕು. ಅದು ಮುಖ್ಯ’ ಎಂದು ಯುವತಿ ಮಾತನಾಡಿ ವಿಡಿಯೋ ವೈರಲ್ ಆಗುತ್ತಿದೆ. ಪತ್ನಿ ಬಿಟ್ಟು ಪವಿತ್ರಾಗೌಡ ಸಹವಾಸ ಮಾಡಿ ಜೈಲಲ್ಲಿ ಬೆಡ್‌ಗೆ ಪರದಾಡುತ್ತಿರುವ ನಟ ದರ್ಶನ್‌ಗೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:KEA: ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗೆ KEA ಯಿಂದ ಅರ್ಜಿ ಆಹ್ವಾನ!!
Comments are closed.