Home News Flipkart : ದೀಪಾವಳಿಗೆ ಬಂಪರ್ ಆಫರ್ ಘೋಷಿಸಿದ Flipkart – ಟಿವಿ ಮೊಬೈಲ್ ದರಗಳಲ್ಲಿ ಬಾರಿ...

Flipkart : ದೀಪಾವಳಿಗೆ ಬಂಪರ್ ಆಫರ್ ಘೋಷಿಸಿದ Flipkart – ಟಿವಿ ಮೊಬೈಲ್ ದರಗಳಲ್ಲಿ ಬಾರಿ ಇಳಿಕೆ

Hindu neighbor gifts plot of land

Hindu neighbour gifts land to Muslim journalist

Flipkart: ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಈ ಸಮಯದಲ್ಲಿ ಜನರ ಖರೀದಿಗಳು ಕೂಡ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ flipkart ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದ್ದು ಟಿವಿ ಮೊಬೈಲ್ಗಳ ದರದಲ್ಲಿ ಬಾರಿ ಇಳಿಕೆಯಾಗಿದೆ.

ಹೌದು, ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಪ್ರಾರಂಭವಾಗಿರುವ ದೀಪಾವಳಿ ಮಾರಾಟದಲ್ಲಿ, ನೀವು ಕೇವಲ 5499 ರೂ. ಗಳ ಆರಂಭಿಕ ಬೆಲೆಯಲ್ಲಿ LED ಸ್ಮಾರ್ಟ್ ಟಿವಿಯನ್ನು ಮನೆಗೆ ತರಬಹುದಾಗಿದೆ. ಅಂದಹಾಗೆ ಥಾಮ್ಸನ್‌ನ 24-ಇಂಚಿನ ಸ್ಕ್ರೀನ್ ಗಾತ್ರದ ಸ್ಮಾರ್ಟ್ ಟಿವಿ ಮಾದರಿ ಸಂಖ್ಯೆ 24AlphaQ001 ಅನ್ನು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಕೇವಲ 5,999 ರೂ. ಗಳಿಗೆ ಖರೀದಿಸಬಹುದು. ಮಾದರಿ ಸಂಖ್ಯೆ 24TM2490-25 ಅನ್ನು ಕೇವಲ 5,499 ರೂ. ಗಳಿಗೆ ಖರೀದಿಸಬಹುದು. ಕಂಪನಿಯು ಈ ಎರಡು ಸ್ಮಾರ್ಟ್ ಟಿವಿಗಳನ್ನು 24-ಇಂಚಿನ ಸ್ಕ್ರೀನ್ ಗಾತ್ರದಲ್ಲಿ ಹೊಂದಿದೆ. ಆದರೆ, 32-ಇಂಚಿನ ಸ್ಮಾರ್ಟ್ ಟಿವಿ ಮಾದರಿ ಸಂಖ್ಯೆ 32TM3290-25 ಅನ್ನು 6,999 ರೂ. ಗಳಿಗೆ ಖರೀದಿಸಬಹುದು.

ಐಫೋನ್ ಮೇಲಿನ ಡಿಸ್ಕೌಂಟ್ ಗಳು:

ಐಫೋನ್ 16 ರೂ. 54,999 ಕ್ಕೆ ಲಭ್ಯವಿದ್ದು, ಮೂಲ ಬೆಲೆ ರೂ. 79,900 ಆಗಿತ್ತು. ಐಫೋನ್ 16 ಪ್ರೊ ಮ್ಯಾಕ್ಸ್ ರೂ. 1,02,999 ದರದಲ್ಲಿ ದೊರೆಯುತ್ತದೆ, ಇದರ ಮೂಲ ಬೆಲೆ ರೂ. 1,44,900. ಹೀಗೆ ಗ್ರಾಹಕರು ತಮ್ಮ ಇಷ್ಟದ ಐಫೋನ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದು.

ಗೂಗಲ್ ಪಿಕ್ಸೆಲ್ 10 ಮತ್ತು 9 ಪ್ರೊ ಫೋಲ್ಡ್ ಮೇಲಿನ ಡಿಸ್ಕೌಂಟ್ ಗಳು:

ಗೂಗಲ್ ಪಿಕ್ಸೆಲ್ 10 ಪ್ರೊ ಫೋಲ್ಡ್ ರೂ. 1,57,999 ಕ್ಕೆ ಲಭ್ಯವಿದ್ದು, ಮೂಲ ಬೆಲೆ ರೂ. 1,72,999. ಇದರೊಂದಿಗೆ ರೂ. 10,000 ಬ್ಯಾಂಕ್ ರಿಯಾಯಿತಿ ಮತ್ತು ರೂ. 5,000 ಟ್ರೇಡ್-ಇನ್ ಬೋನಸ್ ದೊರೆಯುತ್ತದೆ. ಪಿಕ್ಸೆಲ್ 9 ಪ್ರೊ ಫೋಲ್ಡ್ ರೂ. 84,999 (ಆರಂಭಿಕ ರೂ. 1,72,999) ದರದಲ್ಲಿ ಲಭ್ಯವಿದ್ದು, ಶೇ. 10 ಬ್ಯಾಂಕ್ ರಿಯಾಯಿತಿ ಮತ್ತು ಟ್ರೇಡ್-ಇನ್ ಬೋನಸ್ ಸಹ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಮತ್ತು ಮೋಟೋರೋಲಾ ರಿಯಾಯಿತಿಗಳು:

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 FE ರೂ. 29,999 (ಆರಂಭಿಕ ರೂ. 59,999) ಮತ್ತು S24 (ಸ್ನಾಪ್‌ಡ್ರಾಗನ್ 8 ಜೆನ್ 3) ರೂ. 38,999 (ಆರಂಭಿಕ ರೂ. 74,999) ದರದಲ್ಲಿ ಲಭ್ಯವಿದೆ. ಮೋಟೋರೋಲಾ ರೇಜರ್ 60 ರೂ. 39,999 (ಆರಂಭಿಕ ರೂ. 49,999), ಎಡ್ಜ್ 60 ಫ್ಯೂಷನ್ ರೂ. 18,999 (ಆರಂಭಿಕ ರೂ. 22,999) ಮತ್ತು ಎಡ್ಜ್ 60 ಪ್ರೊ ರೂ. 24,999 (ಆರಂಭಿಕ ರೂ. 29,999) ದರದಲ್ಲಿ ಮಾರಾಟಕ್ಕೆ ಬಂದಿದೆ.

ಇದನ್ನೂ ಓದಿ:Adhar Card: ಆಧಾರ್ ಕಾರ್ಡ್ ಅಪ್ಡೇಟ್ ಮತ್ತೆ ದುಬಾರಿ