Adhar Card: ಆಧಾರ್ ಕಾರ್ಡ್ ಅಪ್ಡೇಟ್ ಮತ್ತೆ ದುಬಾರಿ

Adhar Card: ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ಭಾರತೀಯನ ಗುರುತಿನ ಚೀಟಿ ಇದ್ದಂತೆ. ಸರ್ಕಾರದ ಯಾವುದೇ ಪ್ರಯೋಜನವನ್ನು ಪಡೆಯಲು ಈ ಆಧಾರ್ ಕಾರ್ಡ್(Adhar card) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬರೂ ಹತ್ತು ವರ್ಷಗಳಿಗೊಮ್ಮೆ ಅಪ್ಡೇಟ್ ಮಾಡಿಸಬೇಕು ಎಂದು ಸರ್ಕಾರ ಆಗಿಂದಲೂ ಹೇಳುತ್ತಲೇ ಬಂದಿದೆ. ಅಲ್ಲದೆ ಇದಕ್ಕೆ ಉಚಿತವಾಗಿ ವ್ಯವಸ್ಥೆಯನ್ನು ಕೂಡ ಕಲ್ಪಿಸಿತ್ತು. ಆದರೂ ಅನೇಕರು ಇನ್ನೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲ. ಆದ್ರೆ ಇನ್ನು ಮುಂದೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ದುಬಾರಿ ಹಣವನ್ನು ತೆರೆಯಬೇಕಾಗುತ್ತದೆ.

ಹೌದು, ಆಧಾರ್ ಕಾರ್ಡ್‌ನಲ್ಲಿ ಹಲವು ಬಾರಿ ತಪ್ಪು ಮಾಹಿತಿಯನ್ನು ನಮೂದಿಸಲಾಗುತ್ತದೆ. ಅದನ್ನು ನಾವು ನವೀಕರಿಸುವ ಮೂಲಕ ಸರಿಪಡಿಸಬಹುದು. ಆದರೆ ಈಗ ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ದುಬಾರಿಯಾಗಿದೆ. ಆಧಾರ್ ನವೀಕರಣಕ್ಕೆ ಸಂಬಂಧಿಸಿದಂತೆ ಯುಐಡಿಎಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ , ಇದರಲ್ಲಿ ಈಗ ಬಳಕೆದಾರರು ಆಧಾರ್ ಅನ್ನು ನವೀಕರಿಸಲು ಮೊದಲಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಇದನ್ನೂ ಓದಿ:Filmfare Awards 2025: ‘ಫಿಲ್ಮ್ ಫೇರ್’ ಅವಾರ್ಡ್ ಪ್ರಕಟ: ವಿಜೇತರ ಪಟ್ಟಿ ಇಲ್ಲಿದೆ
ಇಲ್ಲಿಯವರೆಗೆ, ಆಧಾರ್ ಹೊಂದಿರುವವರಿಗೆ ಹೆಸರು ಮತ್ತು ವಿಳಾಸದಂತಹ ಸರಳ ತಿದ್ದುಪಡಿಗಳಿಗೆ ಕೇವಲ ₹50 ಶುಲ್ಕ ವಿಧಿಸಲಾಗುತ್ತಿತ್ತು, ಆದರೆ ಅಕ್ಟೋಬರ್ 1, 2025 ರಿಂದ, ಅವರ ಹೆಸರು ಮತ್ತು ವಿಳಾಸವನ್ನು ನವೀಕರಿಸಲು ₹75 ಶುಲ್ಕ ವಿಧಿಸಲಾಗುತ್ತದೆ. ಫೋಟೋ, ಫಿಂಗರ್‌ಪ್ರಿಂಟ್ ಮತ್ತು ಐರಿಸ್‌ನಂತಹ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸಲು ಯುಐಡಿಎಐ ಶುಲ್ಕವನ್ನು ಹೆಚ್ಚಿಸಿದೆ. ಇಲ್ಲಿಯವರೆಗೆ, ಆಧಾರ್ ಹೊಂದಿರುವವರಿಗೆ ಈ ವಿವರಗಳನ್ನು ನವೀಕರಿಸಲು ₹100 ಶುಲ್ಕ ವಿಧಿಸಲಾಗುತ್ತಿತ್ತು, ಆದರೆ ಈಗ ಅವರು ₹125 ಪಾವತಿಸಬೇಕಾಗುತ್ತದೆ.
Comments are closed.